×
Ad

ಗಾಂಧೀಜಿ, ಶಾಸ್ತ್ರಿ ವ್ಯಕ್ತಿಗಳಲ್ಲ; ಸಿದ್ಧಾಂತ: ಪದ್ಮಪ್ರಸಾದ್ ಜೈನ್

Update: 2017-10-02 21:03 IST

ಕುಂದಾಪುರ, ಅ.2: ಶತಮಾನಗಳ ದೌರ್ಜನ್ಯ ಮತ್ತು ಗುಲಾಮಗಿರಿಯ ಮೂಲಕ ನಲುಗಿ ಹೋಗಿದ್ದ ದೇಶದ ಶೋಷಿತ ಜನಾಂಗಕ್ಕೆ ಅಹಿಂಸಾ ತತ್ವದ ಮೂಲಕ ಸ್ವಾತಂತ್ರ ಗಳಿಸಿಕೊಟ್ಟ ಮಹಾತ್ಮ ಗಾಂಧಿ ಹಾಗೂ ಸ್ವಾತಂತ್ರಾನಂತರ ದೇಶದ ಅತೀ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪದವಿಯ ಹೊಣೆಯನ್ನು ಹೊತ್ತು ಜೈ ಜವಾನ್, ಜೈ ಕಿಸಾನ್ ಘೋಷ ವಾಕ್ಯದಡಿ ದೇಶವನ್ನು ಪ್ರಗತಿ ಪಥದೆಡೆಗೆ ಒಯ್ದ ಲಾಲ್‌ಬಹದ್ದೂರ್ ಶಾಸ್ತ್ರಿಗಳು ಕೇವಲ ವ್ಯಕ್ತಿಗಳಾಗಿರಲಿಲ್ಲ. ಅವರು ದೇಶದ ಶಕ್ತಿಯಾಗಿದ್ದರು, ಸಿದ್ಧಾಂತವಾಗಿದ್ದರು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಪದ್ಮಪ್ರಸಾದ್ ಜೈನ್ ಹೇಳಿದ್ದಾರೆ.

ಸೋಮವಾರ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಅವರ 148ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಗಳ 113ನೇ ಜನ್ಮ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತಿದ್ದು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ ಗಾಂಧೀಜಿ ಮತ್ತು ಶಾಸ್ತ್ರಿಗಳ ಭಾವಚಿತ್ರಗಳಿಗೆ ಹೂಹಾರ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಸಾಧನೆಗಳನ್ನು ಹಾಗೂ ಸಂದೇಶಗನ್ನು ಕಾರ್ಯಕರ್ತರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾರಾಯಣ ಆಚಾರ್, ಶಿವಾನಂದ ಕೆ., ಎಪಿಎಂಸಿ ಉಪಾಧ್ಯಕ್ಷ ಗಣೇಶ ಶೇರೆಗಾರ್, ಕೆಪಿಸಿಸಿ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪುರಸಬಾ ಸದಸ್ಯರುಗಳಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ಚಂದ್ರ ಅಮೀನ್, ಕೇಶವ ಭಟ್, ಉಮೇಶ್ ಬಿ., ದೇವಕಿ ಸಣ್ಣಯ್ಯ, ಮಹಿಳಾ ಕಾಂಗ್ರೆಸ್‌ನ ಶೋಭಾ ಸಚ್ಛಿದಾನಂದ, ಆಶಾ ಕರ್ವೆಲ್ಲೋ, ಮುಖಂಡರಾದ ನಾಗೇಶ್, ರಘುರಾಮ್ ನಾಯ್ಕೋ, ಸುರೇಶ್ ಕೆ., ಅಬು ಮಹಮ್ಮದ್, ಅಶೋಕ್ ಸುರ್ಣ ಹಾಗೂ ಇತರರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News