×
Ad

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಧರಣಿ ಸತ್ಯಾಗ್ರಹ

Update: 2017-10-02 22:17 IST

ಮಂಗಳೂರು, ಅ. 2: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಧರಣಿಯ ಸತ್ಯಾಗ್ರಹದ ಭಾಗವಾಗಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯ ವತಿಯಿಂದ ಸೋಮವಾರ ನಗರದ ಪುರಭವನದ ಎದುರಿನ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಿಂತಕ ಶಿವಸುಂದರ್ ಅವರು, ಗಾಂಧಿಯ ಹಂತಕರೇ ಗೌಲಿ ಲಂಕೇಶ್‌ರನ್ನು ಕೊಂದಿದ್ದಾರೆ. ಗೌರಿ ಲಂಕೇಶ್ ಹತ್ಯೆಯಾದಂದಿನಿಂದ ಈವರೆಗೆ ಜಾಗತಿಕವಾಗಿ ಹಲವು ಪ್ರತಿಭಟನೆಗಳು ನಡೆದಿವೆ. ಲಕ್ಷಾಂತರ ಮಂದಿ ‘ನಾನು ಗೌರಿ.. ನಾವು ಗೌರಿ’ ಎಂದು ಷೋಷಿಸಿದ್ದಾರೆ ಎಂದರು.

ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ಪತ್ರಕರ್ತ ಹರ್ಷದ್ ವರ್ಕಾಡಿ, ಸನ್ಮಾರ್ಗ ಸಂಪಾದಕ ಎ.ಕೆ.ಕುಕ್ಕಿಲ, ಲೇಖಕಿ ಶಹನಾಝ್ ಎಂ., ವಾಣಿ ಪೆರಿಯೋಡಿ, ಉಮರ್ ಯು.ಎಚ್. ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News