ನಾಪತ್ತೆಯಾದ ವ್ಯಕ್ತಿಯ ಸ್ಕೂಟರ್ ಪತ್ತೆ
Update: 2017-10-02 22:31 IST
ಬ್ರಹ್ಮಾವರ, ಅ.2: ಮನೆಯಿಂದ ಸ್ಕೂಟರ್‌ನಲ್ಲಿ ಹೊರಗಡೆ ಹೋದ ವ್ಯಕ್ತಿ ಯೊಬ್ಬರು ನಾಪತ್ತೆಯಾಗಿರುವ ಘಟನೆ ಸೆ.24ರಂದು ಬೆಳಗ್ಗೆ ಬೈಕಾಡಿ ಗಾಂಧಿ ನಗರ ಎಂಬಲ್ಲಿ ನಡೆದಿದೆ.
ಗಾಂಧಿನಗರದ ನಿವಾಸಿ ಡೆನಿಸ್ ಡಿಸಿಲ್ವಾ(52) ನಾಪತ್ತೆಯಾದವರು. ಇವರು ಮನೆಯಿಂದ ಹೋಗುವಾಗ ತೆಗೆದುಕೊಂಡು ಹೋಗಿದ್ದ ಟಿವಿಎಸ್ ಸ್ಕೂಟರ್ ಸೆ.26ರಂದು ಸಂಜೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಯ ಬಳಿ ಪತ್ತೆ ಯಾಗಿದೆ. ಆದರೆ ಅವರ ಬಗ್ಗೆ ಈವರೆಗೆ ಸುಳಿವು ಇಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.