×
Ad

ಅ. 4ರಂದು ಯು.ಪಿ. ಮುಖ್ಯಮಂತ್ರಿ ಆದಿತ್ಯನಾಥ್ ಕಣ್ಣೂರಿಗೆ

Update: 2017-10-03 19:43 IST

ಕಾಸರಗೋಡು, ಅ.3: ಕೇರಳದಲ್ಲಿ ಬಿಜೆಪಿ ಕೈಗೊಂಡಿರುವ ಜನ ರಕ್ಷಾ ಯಾತ್ರೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.

ಅಮಿತ್ ಶಾ ಭೇಟಿಯನ್ನು ರದ್ದುಗೊಳಿಸಿ ದೆಹಲಿಗೆ ತೆರಳಿದ್ದು  ಅ.4ರಂದು ನಡೆಯುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆದಿತ್ಯನಾಥ್ ರಿಗೆ ಸೂಚನೆ ನೀಡಲಾಗಿದ್ದು, ಕೊಚೇರಿಯಿಂದ ಕಣ್ಣೂರು ತನಕದ ಪಾದಯಾತ್ರೆಯಲ್ಲಿ ಆದಿತ್ಯನಾಥ್ ಪಾಲ್ಗೊಳ್ಳುವರು.

ಬುಧವಾರ ಕಣ್ಣೂರು ಹಾಗೂ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವನ್ನು ಅಮಿತ್ ಶಾ ಮೊಟಕುಗೊಳಿಸಿ ದೆಹಲಿಗೆ ಮರಳಿದ್ದಾರೆ. ಅ.17ರ ತನಕ ನಡೆಯುವ ಯಾತ್ರೆಯಲ್ಲಿ ಕೇಂದ್ರ ಸಚಿವರಾದ ವಿ.ಕೆ. ಸಿಂಗ್,  ನಿರ್ಮಲಾ ಸೀತಾರಾಮನ್, ಅನಂತಕುಮಾರ್,  ಸ್ಮೃತಿ  ಇರಾನಿ,  ಧರ್ಮೇಂದ್ರ ಪ್ರಧಾನ್,  ರಾಜ್ ವರ್ಧನ್ ಸಿಂಗ್ ರಾಥೋಡ್ ಮೊದಲಾದವರು ಪಾಲ್ಗೊಳ್ಳುವರು ಎಂದು ಪ್ರಕಟನೆ ತಿಳಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News