×
Ad

ಸಚಿವ ಪ್ರಮೋದ್ ಫಿಶ್‌ಮಿಲ್‌ನಲ್ಲಿ ಬೆಂಕಿ ಅನಾಹುತ

Update: 2017-10-03 20:26 IST

ಉಡುಪಿ, ಅ.3: ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾಲಕತ್ವದ ಮಲ್ಪೆಯ ರಾಜ್ ಫಿಶ್ ಮಿಲ್‌ನಲ್ಲಿ ಇಂದು ಸಂಜೆ 4.15ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ  ಬಾಯ್ಲರ್ ಬೆಂಕಿಗೆ ಅಹುತಿಯಾಗಿರುವ ಬಗ್ಗೆ ವರದಿಯಾಗಿದೆ.

ಫಿಶ್‌ಮಿಲ್‌ನ ಬಾಯ್ಲರ್‌ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು ಈ ಸಂದರ್ಭ ಅಲ್ಲಿದ ಕೆಲಸದವರು ಕೂಡಲೇ ಹೊರಗಡೆ ಓಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಾಯ್ಲರ್ ಫೈಬರ್ ಆಗಿರುವುದರಿಂದ ಬೆಂಕಿ ಜೊತೆ ದಟ್ಟ ಹೊಗೆ ಕಾಣಿಸಿಕೊಂಡು ಇಡೀ ಪರಿಸರದಲ್ಲಿ ಆತಂಕ ಸೃಷ್ಠಿ ಯಾಗಿತ್ತು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿ, ಸಹಾಯಕ ಠಾಣಾಧಿಕಾರಿ ಬೇವಪ್ಪ ಪಟೆಗಾರ್ ನೇತೃತ್ವದ ಬೆಂಕಿ ನಂದಿಸುವ ಕಾರ್ಯ ಮಾಡಿದರು.

ಬೆಂಕಿ ಬೇರೆ ಕಡೆ ವಿಸ್ತರಿಸದಂತೆ ಕ್ರಮ ವಹಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ, ಸುಮಾರು ಅರ್ಧ ಗಂಟೆಯಲ್ಲಿ ಬೆಂಕಿ ನಂದಿಸಿದರು. ಈ ಅನಾಹುತದಿಂದ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News