×
Ad

ಅ.5: ಸಂಸದರಿಂದ ಜಿಎಸ್‌ಟಿ ಅವಲೆಕನಾ ಸಭೆ

Update: 2017-10-03 20:39 IST

ಉಡುಪಿ, ಅ.3: ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದ ಬೃಹತ್ ತೆರಿಗೆ ಸುಧಾರಣಾ ಕಾಯಿದೆ ಜಿಎಸ್‌ಟಿಯ ಸಾಧಕ ಭಾದಕಗಳ ಕುರಿತು ಚರ್ಚಿಸಲು ಅ.5ರ ಗುರುವಾರ ಬೆಳಗ್ಗೆ 10:30ಕ್ಕೆ ಹೋಟೆಲ್ ಡಯಾನಾ ಸಭಾಂಗಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅವಲೋಕನಾ ಸಭೆ ಯನ್ನು ಕರೆಯಲಾಗಿದೆ.

ಜಿಎಸ್‌ಟಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲು ಬಯಸುವ ಉಡುಪಿ ಜಿಲ್ಲೆಯ ಸಂಘ-ಸಂಸ್ಥೆಗಳು ಈ ಅವಲೋಕನಾ ಸಭೆಯಲ್ಲಿ ಪಾಲ್ಗೊಂಡು ಲಿಖಿತ ರೂಪದಲ್ಲಿ ಕೇಂದ್ರ ಸರಕಾರಕ್ಕೆ ಮನವಿ ನೀಡಬಹುದು ಎಂದು ಸಂಸದರ ಕಛೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News