×
Ad

ಎಸ್ಸೆಸ್ಸೆಫ್ ದ.ಕ. ಜಿಲ್ಲಾ '4ಜಿ ಕ್ಯಾಂಪ್' ಸಮಾರೋಪ

Update: 2017-10-03 20:51 IST

ಉಜಿರೆ, ಅ. 3: ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ವತಿಯಿಂದ 'ಉನ್ನತ ಗುರಿಗಾಗಿ ಉತ್ತಮ ಮಾರ್ಗದರ್ಶನ' ಎಂಬ ಘೋಷ ವಾಕ್ಯದಲ್ಲಿ ಯುನಿಟ್ ಮಟ್ಟದಲ್ಲಿ ಸಕ್ರೀಯ ಕಾರ್ಯಕರ್ತರನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಡೆದ  '4ಜಿ ಕ್ಯಾಂಪ್' ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಅವರ ಅಧ್ಯಕ್ಷತೆಯಲ್ಲಿ ಉಜಿರೆ ಮಲ್ಜಾ  ವಿದ್ಯಾ ಸಂಸ್ಥೆಯಲ್ಲಿ  ಸಮಾರೋಪಗೊಂಡಿತು.

ಅ.1 ರಂದು ಮಧ್ಯಾಹ್ನ ಮಲ್ಜಾ  ವಿದ್ಯಾ ಸಂಸ್ಥೆಯ ಸೈಯದ್ ಜಲಾಲುದ್ದೀನ್ ತಂಙಳ್ ಅವರ ದುಆ:ದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ  ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ನಂತರ ನಡೆದ ತರಗತಿಯಲ್ಲಿ ಉಮರ್ ಸಖಾಫಿ ಎಡಪ್ಪಾಲ, ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಅಬ್ದುಸ್ಸಲಾಂ ಮುಸ್ಲಿಯಾರ್ ದೇವರಶೋಲ, ರಫೀಕ್ ಸಅದಿ ಬಾಕಿಮಾರ್ ಉಸ್ತಾದರುಗಳಿಂದ   ತರಗತಿಗಳು, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಸೈಯದ್ ಸಿ.ಟಿ.ಎಂ. ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ಅವರಿಂದ ಬ್ರೈನ್ ಜಿಮ್ಎಂಬ ಪ್ರಾಯೋಗಿಕ ತರಗತಿ, ಹೆಲ್ತ್ ಜಿಮ್ಯೊ ಜನೆ ಮಂಡನೆ ಕಾರ್ಯಕ್ರಮಗಳು ನಡೆಯಿತು.

ಸಮಾರೋಪ ಸಮಾರಮಂಭವು ಅ.2 ಸೋಮವಾರ ಸಂಜೆ 3 ಗಂಟೆಗೆ ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಲ್ಜಾ ವಿದ್ಯಾ ಸಂಸ್ಥೆಯ ಸೈಯದ್ ಜಲಾಲುದ್ದೀನ್ ತಂಙಳ್ ದುಆ: ನೆರವೇರಿಸಿದರು. ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ  ಖಾಝಿ ಬೇಕಲ್ ಉಸ್ತಾದ್ ಉದ್ಘಾಟಿಸಿದರು. ಮಾಜಿ ಎಸ್ಸೆಸ್ಸೆಫ್ ನಾಯಕರ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ, ಜಿ.ಎಂ. ಮಹಮ್ಮದ್ ಕಾಮಿಲ್ ಸಖಾಫಿ, ಹಾಫಿಲ್ ಯಾಕೂಬ್ ಸಅದಿ ನಾವೂರು, ಅಬ್ದುಲ್ ರಹ್ಮಾನ್ ಹಾಜಿ ಪ್ರಿಂಟೆಕ್, ಆಸಿಫ್ ಹಾಜಿ ಕೃಷ್ಣಾಪುರ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಕೆ.ಸಿ.ಎಫ್ ನಾಯಕ ಸಲೀಂ ಕನ್ಯಾಡಿ ಉಪಸ್ಥಿತರಿದ್ದರು.

ಕ್ಯಾಂಪ್ ಅಮೀರ್ ಶರೀಪ್ ಸಅದಿ ಕಿಲ್ಲೂರು ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News