ಎಂಐಟಿ ಮಣಿಪಾಲಕ್ಕೆ ‘ಎಐಸಿಟಿಇ ಸ್ವಚ್ಛ ಕ್ಯಾಂಪಸ್’ ಪ್ರಶಸ್ತಿ
ಮಣಿಪಾಲ, ಅ.3: ಇಲ್ಲಿನ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸ್ಥಾಪಿಸಿದ ಚೊಚ್ಚಲ ‘ಅತ್ಯಂತ ಸ್ವಚ್ಛ ಕ್ಯಾಂಪಸ್ ಪ್ರಶಸ್ತಿ-2017’ನ್ನು ಗೆದ್ದುಕೊಳ್ಳುವ ಮೂಲಕ ಅತ್ಯುತ್ತಮ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಅಖಿಲ ಭಾರತ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡ ಎಂಐಟಿ, ಆಗ್ನೇಯ ವಲಯದಲ್ಲಿ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ. ಗಾಂಧಿ ಜಯಂತಿಯ ದಿನದಂದು ಪುಣೆಯ ಕಾಲೇಜ ಆಫ್ ಇಂಜಿನಿಯರಿಂಗ್‌ನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಎಂಐಟಿ ಪರವಾಗಿ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ.ಪೈ ಹಾಗೂ ಕಾರ್ಯನಿರ್ವಾಹಕ ವ್ಯವಸ್ಥಾಪಕ ಎಚ್.ಎಸ್.ಭಟ್ ಅವರು ಎಐಸಿಟಿಇ ಅಧ್ಯಕ್ಷ ಡಾ. ಅನಿಲ್ ಡಿ.ಸಹಸ್ರಬುದ್ಧೆ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ವೇಳೆ ಹೊಸದಿಲ್ಲಿಯ ಎಐಸಿಟಿಇ ಪ್ರಧಾನ ಕಚೇರಿಯಲ್ಲಿ ಪ್ರಶಸ್ತಿ ಪಡೆದ ತಾಂತ್ರಿಕ ಕಾಲೇಜುಗಳ ರವಾಗಿ ಗಿಡಗಳನ್ನು ನೆಡಲಾಯಿತು.
ಪ್ರಶಸ್ತಿ ಸ್ಥಾಪನೆಗೊಂಡ ಮೊದಲ ವರ್ಷದಲ್ಲೇ ಎಂಐಟಿ ಪ್ರಶಸ್ತಿ ಗೆದ್ದಿರುವುದಕ್ಕೆ ಹೆಮ್ಮೆ ಹಾಗೂ ಸಂತೋಷವನ್ನು ವ್ಯಕ್ತಪಡಿಸಿರುವ ಎಂಐಟಿ ನ ಇದೇ‰ಶಕ ಹಾಗೂ ಮಣಿಪಾಲ ವಿವಿಯ ಪ್ರೊ ವೈಸ್ ಚಾನ್ಸಲರ್ ಡಾ.ಜಿ.ಕೆ.ಪ್ರಭು, ‘ಮುಂದಿನ ವರ್ಷ ಇನ್ನಷ್ಟು ಉತ್ತಮ ಸಾಧನೆ ಮಾಡಲು ಪ್ರಯತ್ನಿಸುತ್ತೇವೆ’ ಎಂದರು.
ಎಐಸಿಟಿಇ ಆರಂಭಿಸಿರುವ ಅತ್ಯುತ್ತಮ ಯೋಜನೆ ಇದಾಗಿದ್ದು, ಇದರಿಂದ ದೇಶಾದ್ಯಂತ ವಿದ್ಯಾಸಂಸ್ಥೆಗಳ ಕ್ಯಾಂಪಸ್ ವಿದ್ಯಾರ್ಜನೆಗೆ ಪೂರಕವಾಗಿರಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕೇಂದ್ರ ಸರಕಾರದ ‘ಸ್ವಚ್ಛ ಭಾರತ ಮಿಷನ್’ ಅಡಿ ಎಐಸಿಟಿಇ ‘ಸ್ವಚ್ಛ ಕ್ಯಾಂಪಸ್ -2017’ ಸ್ಪರ್ಧೆಯನ್ನು ಕಳೆದ ತಿಂಗಳು ಪ್ರಾರಂಭಿಸಿದ್ದು, ದೇಶಾದ್ಯಂತದ ಹತ್ತು ಸಾವಿರಕ್ಕೂ ಅಧಿಕ ವಿದ್ಯಾಸಂಸ್ಥೆಗಳಿಂದ ಪ್ರವೇಶಗಳನ್ನು ಆಹ್ವಾನಿಸಿತ್ತು. ಮೂಲಭೂತ ಸೌಕರ್ಯ, ಕ್ಯಾಂಪಸ್‌ನ ಸ್ವಚ್ಛತೆ, ಹಸಿರು ವಲಯ, ನೀರು ಉಳಿತಾಯ ಯೋಜನೆ, ದ್ರವ ಮತ್ತು ಘನತ್ಯಾಜ್ಯ ನಿರ್ವಹಣೆ, ಇ-ವೇಸ್ಟ್ ಮ್ಯಾನೇಜ್‌ಮೆಂಟ್, ಪರಿಸರ ಜಾಗೃತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮ ಗಳೊಂದಿಗೆ, ಸಮಾಜಕ್ಕೆ ನೀಡುವ ಕೊಡುಗೆ, ವಿದ್ಯಾರ್ಥಿಗಳ ಭದ್ರತೆ, ಪೌಷ್ಠಿಕ ಆಹಾರ ಮುಂತಾದ ಮಾನದಂಡಗಳ ಮೂಲಕ ಸ್ಪರ್ಧಾ ವಿಜೇತರನ್ನು ನಿರ್ಧರಿಸ ಲಾಗಿತ್ತು.
ಭಾರತದ 20 ರಾಜ್ಯಗಳ ತಾಂತ್ರಿಕ ವಿದ್ಯಾಸಂಸ್ಥೆಗಳು ಈ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರತಿ ಸಂಸ್ಥೆಗಳು ಸಲ್ಲಿಸಿದ ವರದಿಯನ್ನು ಪರಿಶೀಲಿಸಿ, ಆಯ್ಕೆಗಾರರ (ಜ್ಯೂರಿ) ತಂಡ ವಿಜೇತ ತಂಡಗಳನ್ನು ಆಯ್ಕೆ ಮಾಡಿತ್ತು ಎಂದು ಎಂಐಟಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.