ಮನೆಗೆ ನುಗ್ಗಿ ನಗ-ನಗದು ಕಳವು: ದೂರು
Update: 2017-10-03 21:50 IST
ಪುತ್ತೂರು, ಅ. 3: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ಚಿನ್ನಾಭರಣ ಮತ್ತು ರೇಡೋ ವಾಚು ಸಹಿತ ಸುಮಾರು 60 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳವು ನಡೆಸಿದ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರ್ ಎಂಬಲ್ಲಿ ನಡೆದಿದೆ.
ಸಂಟ್ಯಾರ್ ನಿವಾಸಿ ಉದ್ಯಮಿ ಹಮೀದಾಲೀಸ್ ಅವರ ಮನೆಯಲ್ಲಿ ಕಳವು ನಡೆಸಲಾಗಿದೆ. ಮನೆಮಂದಿ ಮನೆಗೆ ಬೀಗ ಹಾಕಿ ನೇರಳಕಟ್ಟೆಯ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು ಅಲ್ಲಿಂದ ಮಂಗಳೂರಿಗೆ ತೆರಳಿ ರಾತ್ರಿ 8 ಗಂಟೆಗೆ ಮನೆಗೆ ಮರಳಿದ್ದರು. ಈ ನಡುವೆ ಮನೆಗೆ ನುಗ್ಗಿದ ಕಳ್ಳರು ಮನೆಯೊಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲೆಮಾರಿನಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಪೆಂಡೆಂಟ್, ಬ್ರಾಸ್‌ಲೈಟ್, 4 ಗ್ರಾಂ ತೂಕದ ಬೆಂಡೋಲೆ ಹಾಗೂ ರೇಡೋ ವಾಚ್ ಕಳವು ಮಾಡಿರುವುದಾಗಿ ದೂರು ನೀಡಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಿ ಪರಿಸೀಲಿಸಲಾಗಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.