ಕಡಬ: ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Update: 2017-10-03 22:05 IST
ಕಡಬ, ಅ. 3: ಮರಕ್ಕೆ ಹತ್ತಿದ್ದ ವ್ಯಕ್ತಿಯೋರ್ವರು ಮರದಿಂದ ಬಿದ್ದು ಮೃತಪಟ್ಟ ಘಟನೆ ಕುಟ್ಟುಪ್ಪಾಡಿಯಲ್ಲಿ ನಡೆದಿದೆ.
ಮೃತರನ್ನು ಕುಟ್ರುಪಾಡಿ ಗ್ರಾಮದ ಮೀನಾಡಿ ಬಳಿಯ ಪುಂಡೈಕೊಚ್ಚಿ ನಿವಾಸಿ ಜತ್ತಪ್ಪ ಗೌಡ (55) ಎಂದು ಗುರುತಿಸಲಾಗಿದೆ. ಇವರು ತನ್ನ ಜಮೀನಿನಲ್ಲಿದ್ದ ಮರಕ್ಕೆ ಹತ್ತಿದ್ದು, ನಂತರ ಆಯತಪ್ಪಿ ಬಿದ್ದಿದ್ದು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.