×
Ad

ಸೂ ಕಿಯಿಂದ ಪ್ರಶಸ್ತಿ ವಾಪಸ್ ಪಡೆದುಕೊಂಡ ಆಕ್ಸ್‌ಫರ್ಡ್ ನಗರ

Update: 2017-10-04 22:55 IST

ಲಂಡನ್, ಅ. 4: ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿಗೆ ಆಕ್ಸ್‌ಫರ್ಡ್ ನಗರ ನೀಡಿರುವ ‘ಫ್ರೀಡಂ ಆಫ್ ಆಕ್ಸ್‌ಫರ್ಡ್’ ಪ್ರಶಸ್ತಿಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ.

ತನ್ನ ದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ತೋರಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂಬುದಾಗಿ ಭಾವಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸೂ ಕಿಯ ‘ಪ್ರಜಾಪ್ರಭುತ್ವಕ್ಕಾಗಿನ ಸುದೀರ್ಘ ಹೋರಾಟ’ವನ್ನು ಪರಿಗಣಿಸಿ ಆಕ್ಸ್‌ಫರ್ಡ್ ಸಿಟಿ ಕೌನ್ಸಿಲ್ 1997ರಲ್ಲಿ ಈ ಪ್ರಶಸ್ತಿ ನೀಡಿತ್ತು.

ಈ ಸಂಬಂಧದ ನಿರ್ಣಯವೊಂದನ್ನು ನಗರ ಕೌನ್ಸಿಲ್ ಮಂಗಳವಾರ ಅವಿರೋಧವಾಗಿ ಅಂಗೀಕರಿಸಿತು. ಇನ್ನು ಮುಂದೆ ಈ ಗೌರವವನ್ನು ಸೂ ಕಿ ಹೊಂದುವುದು ಸರಿಯಾಗುವುದಿಲ್ಲ ಎಂದು ನಿರ್ಣಯ ಹೇಳಿದೆ.

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯೂ ಆಗಿರುವ ಸೂ ಕಿ ಆಕ್ಸ್‌ಫರ್ಡ್ ನಗರದೊಂದಿಗೆ ನಿಕಟ ನಂಟನ್ನು ಹೊಂದಿದ್ದಾರೆ. ಅವರು ಇಲ್ಲಿನ ಪಾರ್ಕ್ ಟೌನ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News