×
Ad

ವಿದೇಶಾಂಗ ಕಾರ್ಯದರ್ಶಿ ಟಿಲರ್‌ಸನ್ ರಾಜೀನಾಮೆ?

Update: 2017-10-04 22:58 IST

ವಾಶಿಂಗ್ಟನ್, ಅ. 4: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ‘ದಡ್ಡ’ ಎಂಬುದಾಗಿ ಬಣ್ಣಿಸಿರುವ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್, ಸಚಿವ ಸಂಪುಟದಿಂದ ಹೊರಹೋಗಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ಬುಧವಾರ ವರದಿ ಮಾಡಿದೆ.

ಶ್ವೇತಭವನದ ನೀತಿಗಳೊಂದಿಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳು ಮತ್ತು ಘರ್ಷಣೆಗಳ ಹಿನ್ನೆಲೆಯಲ್ಲಿ ಟಿಲರ್‌ಸನ್ ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಜುಲೈ ಕೊನೆಯಲ್ಲಿ ಟ್ರಂಪ್ ಬಾಯ್ ಸ್ಕೌಟ್ಸ್ ಆಫ್ ಅಮೆರಿಕವನ್ನು ಉದ್ದೇಶಿಸಿ ರಾಜಕೀಯ ಭಾಷಣ ಮಾಡಿದ ಸಂದರ್ಭದಲ್ಲಿ ಟ್ರಂಪ್ ಮತ್ತು ಟಿಲರ್‌ಸನ್ ನಡುವೆ ಸಂಘರ್ಷ ತಲೆದೋರಿದೆ ಎನ್ನಲಾಗಿದೆ. ಈ ಸಂಸ್ಥೆಯ ನೇತೃತ್ವವನ್ನು ಒಮ್ಮೆ ಟಿಲರ್‌ಸನ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News