‘ವನ್ ಬೆಲ್ಟ್ ವನ್ ರೋಡ್’: ಭಾರತದ ವಿರೋಧಕ್ಕೆ ಅಮೆರಿಕದ ಬೆಂಬಲ
Update: 2017-10-04 23:20 IST
ವಾಶಿಂಗ್ಟನ್, ಅ. 4: ಚೀನಾದ ‘ವನ್ ಬೆಲ್ಟ್ ವನ್ ರೋಡ್’ ಯೋಜನೆಗೆ ಭಾರತ ವ್ಯಕ್ತಪಡಿಸುತ್ತಿರುವ ವಿರೋಧಕ್ಕೆ ಅಮೆರಿಕ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.
ಇಂಥ ಯೋಜನೆಯೊಂದನ್ನು ಹೇರುವ ಪರಿಸ್ಥಿತಿಗೆ ಯಾವುದೇ ದೇಶ ಹೋಗಬಾರದು ಎಂದು ಮಂಗಳವಾರ ನಡೆದ ಸೆನೆಟ್ ವಿಚಾರಣೆಯಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಹೇಳಿದರು.
‘‘ಜಾಗತೀಕರಣಗೊಂಡ ಜಗತ್ತಿನಲ್ಲಿ ಇಂಥ ಹಲವಾರು ಪಟ್ಟಿಗಳು ಮತ್ತು ಹಲವಾರು ರಸ್ತೆಗಳಿವೆ. ‘ವನ್ ಬೆಲ್ಟ್ ವನ್ ರೋಡ್’ ಯೋಜನೆಯನ್ನು ಹೇರುವ ಹಂತಕ್ಕೆ ಯಾವುದೇ ದೇಶ ಹೋಗಬಾರದು’’ ಎಂದು ಮ್ಯಾಟಿಸ್ ನುಡಿದರು.