×
Ad

ಅದಾನಿ ಸಂಸ್ಥೆಯ ಗಣಿಗಾರಿಕೆ ಯೋಜನೆ ವಿರುದ್ಧ ಆಸ್ಟ್ರೇಲಿಯದಾದ್ಯಂತ ಭಾರೀ ಪ್ರತಿಭಟನೆ

Update: 2017-10-07 18:59 IST

ಸಿಡ್ನಿ, ಅ.7: ಅದಾನಿ ಎಂಟರ್ ಪ್ರೈಸಸ್ ನ ಪ್ರಸ್ತಾಪಿತ ಕಲ್ಲಿದ್ದಲು ಗಣಿ ಯೋಜನೆಯ ವಿರುದ್ಧ ಆಸ್ಟ್ರೇಲಿಯದಾದ್ಯಂತ ಶನಿವಾರ ಭಾರೀ ಪ್ರತಿಭಟನೆಗಳು ನಡೆಯಿತು. ಪರಿಸರ ಸಂಬಂಧಿ ಹಾಗು ಹಣಕಾಸಿನ ತೊಂದರೆಗಳಿಂದ ವಿಳಂಬವಾಗಿರುವ ಈ ಯೋಜನೆ ಆಸ್ಟ್ರೇಲಿಯಾದ ಅತೀ ದೊಡ್ಡ ಕಲ್ಲಿದ್ದಲು ಗಣಿಯಾಗಲಿದೆ ಎನ್ನಲಾಗಿದೆ.

ಕ್ವೀನ್ಸ್ ಲ್ಯಾಂಡ್ ನಲ್ಲಿರುವ ಈ ಗಣಿಯಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗಲಿದ್ದು, ಗ್ರೇಟ್ ಬ್ಯಾರಿಯರ್ ರೀಫ್ ಗೂ ಸಮಸ್ಯೆಯಾಗಲಿದೆ ಎಂದು ಪರಿಸರ ಹೋರಾಟಗಾರರು ಆರೋಪಿಸಿದ್ದಾರೆ.

“ಸ್ಟಾಪ್ ಅದಾನಿ’ ಎಂಬ ಈ ಆಂದೋಲನದಲ್ಲಿ ಇಂದು 45 ಪ್ರತಿಭಟನೆಗಳು ನಡೆಯಿತು.

ಸಿಡ್ನಿಯ ಬಾಂಡಿ ಬೀಚ್ ಬಳಿ ಸೇರಿದ 1000ಕ್ಕೂ ಅಧಿಕ ಪ್ರತಿಭಟನಕಾರರು ಅದಾನಿ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಸ್ಟ್ರೇಲಿಯಾದ 50 ಶೇಕಡಕ್ಕೂ ಹೆಚ್ಚು ಪ್ರಜೆಗಳು ಈ ಗಣಿಗಾರಿಕೆಯನ್ನು ವಿರೋಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ,

ಈ ಯೋಜನೆಯಿಂದ ಸಂಸ್ಥೆಯು ಬಿಲಿಯನ್ ಗಟ್ಟಲೆ ಡಾಲರ್ ಗಳನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ನೀಡಲಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಅದಾನಿ ಎಂಟರ್ ಪ್ರೈಸಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News