ರವೀಂದ್ರ ಜಡೇಜ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಆರೋಗ್ಯಾಧಿಕಾರಿಗಳಿಗೆ ಸಿಕ್ಕಿದ್ದೇನು ಗೊತ್ತೇ?

Update: 2017-10-07 16:42 GMT

ಹೊಸದಿಲ್ಲಿ, ಅ.7: ರಾಜ್ ಕೋಟ್ ನ ನಗರಪಾಲಿಕೆಯ ಆಹಾರ ವಿಭಾಗವು ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜ ಅವರ ರೆಸ್ಟೋರೆಂಟ್ ಸೇರಿದಂತೆ 3 ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದು, ಭಾರೀ ಪ್ರಮಾಣದಲ್ಲಿ ಹಳಸಲು ಆಹಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಹ್ಮದಾಬಾದ್ ಮಿರರ್ ವರದಿ ಮಾಡಿದ್ದು, ‘ಜಡ್ಡೂಸ್ ಫುಡ್ ಫೀಲ್ಡ್’ ಸೇರಿದಂತೆ ಮೂರು ಹೋಟೆಲ್ ಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದು, ಜಡೇಜ ಅವರ ರೆಸ್ಟೋರೆಂಟ್ ನಲ್ಲಿ ಫಂಗಸ್ ಬಂದಂತಹ ಬ್ರೆಡ್ ಗಳು, ಎಕ್ಸ್ ಪಯರಿ ದಿನಾಂಕವಿಲ್ಲದ ತಿನಿಸುಗಳು. ಕೊಳೆತ ತರಕಾರಿಗಳು ಹಾಗು ಫುಡ್ ಕಲರ್ ಗಳು ಪತ್ತೆಯಾಗಿದೆ ಎನ್ನಲಾಗಿದೆ.

“ಫಂಗಸ್ ಬಂದ ಕೆಲ ಬ್ರೆಡ್ ಗಳಿದ್ದದ್ದು ಹೌದು. ಅದನ್ನೆಲ್ಲಾ ರಾತ್ರಿಯೇ ನಾಶಪಡಿಸಿದ್ದೇವೆ. ನಮ್ಮ ಬಳಿ ಕ್ರಷರ್ ಗಳಿಲ್ಲ. ತರಕಾರಿಗಳನ್ನು ಅಲಂಕರಿಸಲು ಫುಡ್ ಕಲರ್ ಗಳನ್ನು ಬಳಸುತ್ತಿದ್ದೆವು. ಆಹಾರಕ್ಕೆ ಉಪಯೋಗಿಸುತ್ತಿರಲಿಲ್ಲ” ಎಂದು ಜಡೇಜ ಅವರ ಸಹೋದರಿ ನೈನಾಬಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News