‘ಆಕಾಶವಾಣಿ ಸಂಗೀತ ಸಮ್ಮೇಳನ 2017’ ಕಾರ್ಯಕ್ರಮ
Update: 2017-10-07 22:39 IST
ಮಂಗಳೂರು, ಅ. 7: ಮಂಗಳೂರು ಆಕಾಶವಾಣಿ ವತಿಯಿಂದ ಶನಿವಾರ ನಗರದ ಪುರಭವನದಲ್ಲಿ ‘ಆಕಾಶವಾಣಿ ಸಂಗೀತ ಸಮ್ಮೇಳನ 2017’ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನೆರವೇರಿತು.
ಚೆನ್ನೈನ ಅಡಯಾರ್ ಎಸ್.ಜಯರಾಮನ್ (ನಾದಸ್ವರ), ಚೆನ್ನೈನ ಅಡಯಾರ್ ಜೆ.ವೆಂಕಟೇಶ್ (ನಾದಸ್ವರ ಸಹಕಾರ), ಪುದುಚೇರಿಯ ವೆಲಿಯಂಪಾಕ್ಕಮ್ ವಿ.ಎಂ.ಗಣಪತಿ (ವಿಶೇಷ ತವಿಲ್) ಕಲಾವಿದರ ತಂಡದಿಂದ ನಾದಸ್ವರ ವಾದನ ನಡೆಯಿತು.
ವಿಜಯವಾಡದ ವಿ.ಎಲ್.ತುಳಸಿ ವಿಶ್ವನಾಥ್ (ಹಾಡುಗಾರಿಕೆ), ವಿಜಯವಾಡದ ಪಿ.ನಂದಕುಮಾರ್ (ವಯಲಿನ್), ವಿಶಾಖಪಟ್ಟಣದ ಎಂ.ಏಡುಕೊಂಡಲು (ಮೃದಂಗ) ಮತ್ತು ಹೈದರಾಬಾದ್‌ನ ಪಿ.ವಿ.ರಮಣಮೂರ್ತಿ (ಘಟಂ) ಕಲಾವಿದರ ತಂಡದಿಂದ ಹಾಡುಗಾರಿಕೆ ನಡೆಯಿತು.
ಕಾರ್ಯಕ್ರಮದ ಮುಖ್ಯಸ್ಥೆ ಉಷಾ ಲತಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮನೋಹರ್ ಮತ್ತು ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.