ಆಳ್ವಾಸ್‌ನ ವಿಘ್ನೇಶ್ ‘ಮಿಸ್ಟರ್ ಮಂಗಳೂರು ಯುನಿವರ್ಸಿಟಿ’
ಉಡುಪಿ, ಅ.7: ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತ ಕೋತ್ತರ ಕೇಂದ್ರದ ಆಶ್ರಯದಲ್ಲಿ ಶನಿವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಉತ್ತಮ ದೇಹದಾರ್ಡ್ಯಪಟು ಚಾಂಪಿಯನ್‌ಶಿಪ್‌ನಲ್ಲಿ 65ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಮೂಡಬಿದ್ರೆ ಆಳ್ವಾಸ್‌ನ ವಿಘ್ನೇಶ್ ‘ಮಿಸ್ಟರ್ ಮಂಗಳೂರು ಯುನಿವರ್ಸಿಟಿ’ಯಾಗಿ ಮೂಡಿಬಂದರು.
ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡ ಗೆದ್ದುಕೊಂಡರೆ, ದ್ವಿತೀಯ ಸ್ಥಾನವನ್ನು ಮಣಿಪಾಲ ಎಂಪಿಎಂಸಿ ಕಾಲೇಜು ಹಾಗೂ ತೃತೀಯ ಸ್ಥಾನವನ್ನು ಮುಲ್ಕಿ ವಿಜಯ ಕಾಲೇಜು ತಂಡವು ಪಡೆದು ಕೊಂಡಿತು.
ಸ್ಪರ್ಧೆಯ ಫಲಿತಾಂಶ ಹೀಗಿದೆ
60ಕೆ.ಜಿ. ವಿಭಾಗ: ಪ್ರ- ಬಸ್ರೂರು ಶಾರದಾ ಕಾಲೇಜಿನ ಶರತ್ ಶೇರಿಗಾರ್, ದ್ವಿ- ಕಟಪಾಡಿ ಕೆವಿಎಸ್‌ಎಂನ ಗೌತಮ್, ತೃ- ಮಣಿಪಾಲ ಎಂಪಿಎಂಸಿಯ ಸಂದೇಶ್ ಎನ್.
65ಕೆ.ಜಿ.: ಪ್ರ- ಆಳ್ವಾಸ್‌ನ ವಿಗ್ನೇಶ್, ದ್ವಿ- ಸೋಮವಾರ ಪೇಟೆಯ ಸೈಂಟ್ ಜೋಸೆಫ್‌ನ ರತ್ನನ್ ಕೆ.ಎಂ., ತೃ- ಪುತ್ತೂರು ಸೈಂಟ್ ಫಿಲೋಮಿನಾದ ಪ್ರಜ್ವಲ್.
70ಕೆ.ಜಿ.: ಪ್ರ-ವಿಜಯ ಕಾಲೇಜಿನ ಹರ್ಶಲ್ ಕುಮಾರ್, ದ್ವಿ- ಎಂಪಿಎಂಸಿಯ ಅಕ್ಷಯ್ ಕುಮಾರ್, ತೃ- ಪಿಪಿಸಿಯ ಅಭಿಷೇಕ್ ಶೇರಿಗಾರ್. 75ಕೆ.ಜಿ.: ಪ್ರ-ಆಳ್ವಾಸ್‌ನ ಅಶಿತ್ ಶೆಟ್ಟಿ, ದ್ವಿ- ಪಿಪಿಸಿಯ ಗೌತಮ್, ತೃ- ಸೈಂಟ್ ಅಲೋಶಿಯಸ್‌ನ ಅಶೀಶ್ ಕುಮಾರ್.
80ಕೆ.ಜಿ.: ಪ್ರ- ಸುರತ್ಕಲ್ ಗೋವಿಂದಾಸ್‌ನ ವಿರಾಜ್, ದ್ವಿ- ತೆಂಕನಿಡಿ ಯೂರು ಸರಕಾರಿ ಕಾಲೇಜಿನ ನಿರಂಜನ್, ತೃ- ನಿಟ್ಟೆ ಡಾ.ಎನ್‌ಎಸ್‌ಎಎಂನ ಸುದರ್ಶನ್.
90ಕೆ.ಜಿ.: ಆಳ್ವಾಸ್‌ನ ಸ್ವರೂಪ್ ಬಂಗೇರ, ದ್ವಿ- ಎಂಪಿಎಂಸಿಯ ಹೇಮಂತ್, ತೃ- ಾರ್ಕಳ ಭುವನೇಂದ್ರದ ಶ್ರೇಯಸ್.
ಸಮಾರೋಪ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಂತಾ ರಾಷ್ಟ್ರೀಯ ದೇಹದಾರ್ಢ್ಯಪಟು ರೆಮೆಂಡ್ ಡಿಸೋಜ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಯಾಗಿ ರಾಜ್ಯ ಮೀನುಗಾರಿಕೆ, ಯುವ ಜನ ಸಬಲೀಕರಣ ಮತ್ತು ಕ್ರೀಡೆ ಸಚಿವ ಪ್ರಮೋದ್ ಮಧ್ವರಾಜ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ದೈಹಿಕ ನಿರ್ದೇಶಕ ಸಂಘದ ಅಧ್ಯಕ್ಷ ವೇಣುಗೋಪಾಲ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ರಾವ್, ದೈಹಿಕ ನಿರ್ದೇಶಕ ಡಾ.ರೋಶನ್ ಕುಮಾರ್ ಮೊದ ಲಾದವರು ಉಪಸ್ಥಿತರಿದ್ದರು.