×
Ad

ಹೊಟೇಲಿಗರ ಸಮಾವೇಶ ಉದ್ಘಾಟಿಸಿ ಪೇಜಾವರ ಶ್ರೀ

Update: 2017-10-07 23:16 IST

ಉಡುಪಿ, ಅ.7: ಸಮಾಜದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯದಲ್ಲಿ ಹೊಟೇಲ್ ಮಾಲಕರ ಪಾತ್ರ ಹಿರಿದಾದುದು. ಸಂಪತ್ತಿನ ಸಂಗ್ರಹ ಮತ್ತು ಅದರ ವಿತರಣೆಯಲ್ಲಿ ಹಾಗೂ ಗ್ರಾಹಕ ಸೇವೆ ಮತ್ತು ಸಮಾಜ ಸೇವೆಯಲ್ಲಿ ಹೊಟೇಲಿಗರು ಮುಂಚೂಣಿಯಲ್ಲಿದ್ದು, ಈ ಪ್ರವೃತ್ತಿ ಇನ್ನಷ್ಟು ಹೆಚ್ಚಲಿ ಎಂದು ಪರ್ಯಾಯ ಶ್ರೀಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ  ಸ್ವಾಮಿಜಿ  ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಆಶ್ರಯದಲ್ಲಿ ಶನಿವಾರ ರಾಜಾಂಗಣದಲ್ಲಿ ನಡೆದ ‘ಶ್ರೀಕೃಷ್ಣಾನುಗ್ರಹ’ ಸಂಸ್ಕೃತಿ, ಸಿಂಚನ, ಸಮನ್ವಯ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ದೋಣಿ ಚಲಿಸಬೇಕಾದರೆ ನೀರು ಬೇಕು. ಆದರೆ ನೀರು ದೋಣಿಯ ಹೊರಗೆ ಇರಬೇಕು. ಸಂಪತ್ತನ್ನು ಸಹಒಳಗೆ ಕೂಡಿಡದೆ ಅದು ಹೊರಗೆ ಇರಬೇಕು ಎಂದರು.

ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಆಶ್ರಯದಲ್ಲಿ ಶನಿವಾರ ರಾಜಾಂಗಣದಲ್ಲಿ ನಡೆದ ‘ಶ್ರೀಕೃಷ್ಣಾನುಗ್ರಹ’ ಸಂಸ್ಕೃತಿ, ಸಿಂಚನ, ಸಮನ್ವಯ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ದೋಣಿ ಚಲಿಸಬೇಕಾದರೆ ನೀರು ಬೇಕು. ಆದರೆ ನೀರು ದೋಣಿಯ ಹೊರಗೆ ಇರಬೇಕು. ಸಂಪತ್ತನ್ನು ಸಹಒಳಗೆ ಕೂಡಿಡದೆ ಅದು ಹೊರಗೆ ಇರಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಹಸಿದಾಗ ಪ್ರತಿಯೊಬ್ಬರು ಹೊಟೇಲ್ ಮೆಟ್ಟಿಲನ್ನು ಹತ್ತಲೇ ಬೇಕು. ಅನ್ನದಾತನ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಹೊಟೇಲಿನವರ ಜಿಎಸ್‌ಟಿ ಸಮಸ್ಯೆಗಳು ಶೀಘ್ರ ಬೆಹರಿಯುವಂತಾಗಲಿ ಎಂದು ಆಶಿಸಿದರು.

ನಿವೃತ್ತ ಸೈನಿಕರಿಗೆ ಗೌರವ: ವಾಯು ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ ಎಚ್. ನಾರಾಯಣ ಕಾಮತ್ ಹಾಗೂ 16 ವರ್ಷ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುವಾಗ ತನ್ನ ಬಲಗಾಲು ಕಳೆದುಕೊಂಡ ಬೆಳ್ತಂಗಡಿಯ ಚಂದಪ್ಪ ಬಿ.ಎಸ್. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ರಾಜ್ಯ ಸಂಘದ ಅಧ್ಯಕ್ಷ ಎಂ. ರಾಜೇಂದ್ರ ವಹಿಸಿದ್ದರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ ಆಳ್ವ ಶುಭ ಕೋರಿದರು. ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಮಾಜಿ ಶಾಸಕ ಕೆ.ರಘುಪತಿ ಭಟ್, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ರಾಜ್ಯ ಸಂಘದ ಉಪಾಧ್ಯಕ್ಷ ಗುರ್ಮೆ ಸುರೇಶ ಶೆಟ್ಟಿ, ಸಂಚಾಲಕ ಡಯಾನ ಎಂ.ವಿಟ್ಠಲ್ ಪೈ, ಪದಾಧಿಕಾರಿಗಳಾದ ಕುಡ್ಪಿ ಜಗದೀಶ ಶೆಣೈ, ಕೆ.ಎನ್.ವಾಸುದೇವ ಅಡಿಗ, ಚಂದ್ರಶೇಖರ ಹೆಬ್ಬಾರ್, ಶ್ರೀಕಾಂತ ಕೆಮ್ತೂರು, ಜಿ.ಕೆ.ಶೆಟ್ಟಿ, ಪಿ.ಸಿ.ರಾವ್, ರವಿ ಶಾಸ್ತ್ರಿ, ನಾಗೇಶ ಭಟ್, ಮಣಿಪಾಲ ವಾಗ್ಶಾ ಉಪಪ್ರಾಂಶುಪಾಲ ತಿರುಜ್ಞಾನ ಸಂಭಾಂತಮ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ ರಾಜ್ಯ ಸಂಘದ ಗೌರವ ಕಾರ್ಯದರ್ಶಿ ಮಧುಕರ ಎಂ. ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಆರ್.ಟಿ.ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News