ಕಲ್ಲಾಪು: ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಮನವಿ
Update: 2017-10-08 17:50 IST
ಉಳ್ಳಾಲ, ಅ. 8: ಉಳ್ಳಾಲ ನಗರ ಸಭೆ ವ್ಯಾಪ್ತಿಯ ಕಲ್ಲಾಪು ಪರಿಸರದ ಪಟ್ಲ, ಮುಡುಪೋಡಿ ಪ್ರದೇಶದಲ್ಲಿ ವರ್ಷಗಳಿಂದ ಉಂಟಾಗಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಲು ಒತ್ತಾಯಿಸಿ ತಹಶೀಲ್ದಾರ್ ಮಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ಶಫೀಕ್ ಮುಡುಪೋಡಿ, ಹೈದರ್ ಪಟ್ಲ, ಜುನೈದ್ ಪಟ್ಲ, ಶಿಹಾಬ್ ಮುಡುಪೋಡಿ, ಇಮ್ರಾನ್ ಮುಡುಪೋಡಿ ಹಾಗೂ ಇತರರು ಉಪಸ್ಥಿತರಿದ್ದರು.