ಮದ್ಯಪಾನ ಮಾಡಿ ವಾಹನ ಚಲಾಯಿಸಿದ ತಮಿಳು ನಟ ಜೈ ಸಂಪತ್‌ಗೆ ದಂಡ
Update: 2017-10-08 19:33 IST
ಚೆನ್ನೈ, ಅ. 8: ಮದ್ಯ ಸೇವಿಸಿ ವಾಹನ ಚಲಾಯಿಸಿದ ಕಾರಣಕ್ಕೆ ತಮಿಳು ಸಿನೆಮ ನಟ ಜೈ ಸಂಪತ್‌ರಿಗೆ 5,200 ರೂ. ದಂಡ ವಿಧಿಸಲಾಗಿದ್ದು ಅವರ ಚಾಲನಾ ಪರವಾನಿಗೆಯನ್ನು 6 ತಿಂಗಳಾವಧಿಗೆ ಅಮಾನತುಗೊಳಿಸಿರುವ ಘಟನೆ ವರದಿಯಾಗಿದೆ.
ಚೆನ್ನೈನ ಅಡ್ಯಾರ್ ಎಂಬಲ್ಲಿ ಸೆ.21ರಂದು ಜೈಸಂಪತ್ ಚಲಾಯಿಸುತ್ತಿದ್ದ ಆಡಿ ಕಾರು ಸೇತುವೆಯೊಂದರ ತಡೆಗೋಡೆಗೆ ಅಪ್ಪಳಿಸಿತ್ತು. ಅಪಘಾತದ ಸಂದರ್ಭ ಜೈಸಂಪತ್ ಮದ್ಯಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನುಂಗಂಬಾಕಮ್‌ನಲ್ಲಿರುವ ಹೋಟೆಲೊಂದರಲ್ಲಿ ಸ್ನೇಹಿತರೊಂದಿಗೆ ಔತಣಕೂಟ ನಡೆಸಿದ್ದ ಜೈಸಂಪತ್ ವಿಪರೀತ ಮದ್ಯಸೇವಿಸಿದ್ದರು ಎನ್ನಲಾಗಿದ್ದು ನಟನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.