ಗಡಿಯಾರ: ಉಚಿತ ವೈದ್ಯಕೀಯ ತಪಾಸಣೆ ಶಿಬಿರ

Update: 2017-10-08 14:50 GMT

ಗಡಿಯಾರ, ಅ. 8: ಸಮಾಜದಲ್ಲಿ ನಿರ್ಗತಿಕರೆನಿಸಿದ ಜನರ ಆರೋಗ್ಯ ಕಾಪಾಡುವಲ್ಲಿ ಯುವಕರು ಸಂಘಟಿತರಾಗಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುದರೊಂದಿಗೆ ಸೌಹಾರ್ದಯುತವಾದ ಸಮಾಜವನ್ನು ಕಟ್ಟುವುದು ಪ್ರಸ್ತುತ ಕಾಲ ಘಟಕ್ಕೆ ಅನಿವಾರ್ಯ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಟಿ. ಶಕುಂತಲಾ ಶೆಟ್ಟಿ ಹೆಳಿದರು.

ಗಡಿಯಾರದ ದ.ಕ.ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತಿಫಾಕ್ ಮೀಲಾದ್ ಕಮಿಟಿ, ಜೋಗಿಬೆಟ್ಟು ಹಾಗೂ ಕಣಚೂರು ಮೆಡಿಕಲ್ ಕಾಲೇಜು ನಾಟೆಕಲ್, ಮಂಗಳೂರು ಇವರ ಸಹಯೋಗದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಯು.ಕೆ. ಮೊನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಡಿಯಾರ ಬದ್ರಿಯಾ ಜುಮಾ ಮಸೀದಿಯ ಖತೀಬ್ ಟಿ.ಪಿ. ಜಮಾಲುದ್ದೀನ್ ದಾರಿಮಿ, ಅಧ್ಯಕ್ಷ ಅಬ್ದುಲ್ ಅಝೀಝ್ ಪಾರ್ಪಕಜೆ, ದ.ಕ.ಜಿ.ಪ. ಸರಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸದಾನಂದ ಶೆಟ್ಟಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಇಬ್ರಾಹೀಂ ಪೆರಮೊಗರು, ನೆರಳಕಟ್ಟೆ ವ್ಯ.ಸೇ.ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕುಶಲಾ ಎಂ ಪೆರಾಜೆ, ಪುತ್ತೂರು ನಗರ ಸಭೆಯ ನಾಮ ನಿರ್ದೇಶಿತ ಸದಸ್ಯ ಅರ್ಶದ್ ದರ್ಬೆ, ಎಂ ಫ್ರೆಂಡ್ಸ್ ನ ಸದಸ್ಯ ಆಶಿಕ್ ಕುಕ್ಕಾಜೆ, ಮದರಂಗಿ ಮಾಸಿಕದ ಸಂಪಾದಕ ಡಿ.ಐ. ಅಬೂಬಕರ್ ಕೈರಂಗಳ, ಅಕ್ಷರ ಮಾಧ್ಯಮ ಸಂಸ್ಥೆಯ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಯಿಲ್, ಎಸ್ ಡಿ ಪಿ ಐ ಪುತ್ತೂರು ವಿಧಾನ ಸಭಾ ಕಾರ್ಯ ದರ್ಶಿ ಜಬೀರ್ ಅರಿಯಡ್ಕ, ಎಸ್ ಡಿ ಪಿ ಐ ಕಬಕ ವಲಯದ ಉಪಾಧ್ಯಕ್ಷ ಉಸ್ಮಾನ್ ಎ.ಕೆ. , ಇತ್ತಿಫಾಕ್ ಮೀಲಾದ್ ಸಮಿತಿಯ ಗೌರವಾಧ್ಯಕ್ಷ ಹೈದರ್ ವಿದ್ಯಾನಗರ, ಅಧ್ಯಕ್ಷ ರಶೀದ್ ಜೋಗಿಬೆಟ್ಟು, ಉಪಾಧ್ಯಕ್ಷ ಯೂಸುಫ್, ಹಿರಿಯ ಸದಸ್ಯರಾದ  ರಿಯಾಝ್ ವಿದ್ಯಾನಗರ, ಅಝಿಝ್ ವಿದ್ಯಾನಗರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಿ.ಜೆ.ಅಬ್ದುಲ್ ಅಝೀಝ್ ಸ್ವಾಗತಿಸಿ, ನಿರೂಪಿಸಿದರು. ಶಿಬಿರದಲ್ಲಿ 500ಕ್ಕೂ ಅಧಿಕ ಮಂದಿ ಭಾಗವಹಿಸಿ, ಸದುಪಯೋಗವನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News