ಸೇವೆಯ ಮೂಲಕ ಝುಬೈರ್ ಕುಟುಂಬಕ್ಕೆ ಸಂತಾಪ ಸೂಚಿಸಿದ ತಲಪಾಡಿ ಗ್ರಾ.ಪಂ. ಸದಸ್ಯ ಫಾರೂಕ್

Update: 2017-10-08 15:35 GMT

ಉಳ್ಳಾಲ, ಅ. 8: ಮುಕ್ಕಚೇರಿಯಲ್ಲಿ ಹತ್ಯೆಯಾದ ಝುಬೈರ್ ಅವರ  ಮನೆಗೆ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ, ಸಮಾಜಸೇವಕ ,  RTI  ಕಾರ್ಯಕರ್ತ, ಸರಕಾರಿ ಸೌಲಭ್ಯಗಳ ಮಾಹಿತಿದಾರ  ಫಾರೂಕ್ ಅವರು ಇಂದು ಭೇಟಿಯಾಗಿ ಕುಟುಂಬದವರಿಗೆ ಸಂತಾಪ ಸೂಚಿಸಿ, ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ  ಫಾರೂಕ್ ಅವರು ರಾಜ್ಯ ಸರಕಾರದ ವಿಧವಾ ವೇತನ, ಝುಬೈರ್ ಅವರ  ಮಕ್ಕಳಿಗೆ ವಿದ್ಯಾಭ್ಯಾಸ ಸ್ಕಾಲರ್ ಶಿಪ್,  ಹೆಣ್ಣು ಮಕ್ಕಳಿಗೆ ದೊರೆಯುವ ಸುಕನ್ಯಾ ಯೋಜನೆ , ಕೇಂದ್ರ ಸರ್ಕಾರದ ಆಕಸ್ಮಿಕವಾಗಿ ಮರಣ ಹೊಂದಿದವರಿಗೆ ದೊರೆಯುವ ಪರಿಹಾರ ಧನ ಸೇರಿದಂತೆ ಹಲವು ಸರಕಾರಿ ಯೋಜನೆಗಳಿಗೆ ಅಗತ್ಯವಿರುವ  ದಾಖಲೆಗಳನ್ನು  ಸಿದ್ಧಪಡಿಸಿಕೊಟ್ಟರು. ಫಾರೂಕ್  ಎಲ್ಲಾ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಲಿದ್ದಾರೆ. ಇದರಿಂದ ಮಕ್ಕಳು  ಸರಕಾರಿ ಕಚೇರಿಗಳಲ್ಲಿ ಅಲೆದಾಡುವುದನ್ನು ತಪ್ಪಿಸಿದರು. ಝುಬೈರ್  ಕುಟುಂಬದ ಜೊತೆ  ಚರ್ಚೆ ನಡೆಸಿದ ಬಳಿಕ  ಇನ್ನಿತರ ಸಾಮಾಜಿಕ,  ಧಾರ್ಮಿಕ ಸಂಘಟನೆಗಳಿಂದ ಅನಾಥ ಮಕ್ಕಳಿಗೆ ನೆರವು ಯಾಚಿಸಿ ಸೂಕ್ತ ಪರಿಹಾರದ ಭರವಸೆ ನೀಡಿದರು. ಕೃತ್ಯದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸರಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News