ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ನೂರ್ ಜಹಾಂ ರಿಗೆ ಸನ್ಮಾನ
ಭಟ್ಕಳ, ಅ. 8: 2017ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾದ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ತೆಂಗಿನ ಗುಂಡಿ ಇದರ ಮುಖ್ಯಾಧ್ಯಾಪಕಿ ನೂರ್ ಜಹಾಂ ಶೇಖ್‌ರಿಗೆ ವಿಸನ್ ಇಂಡಿಯಾ ಮಿಷನ್ ಫೌಂಡೇಶನ್ ನಿಂದ ಸನ್ಮಾನಿಸಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ನೂರ್ ಜಹಾಂ ತಮ್ಮ ಸೇವಾದಿನಗಳನ್ನು ಸ್ಮರಿಸಿ ಮಕ್ಕಳ ತರಬೇತಿಗಾಗಿ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದು ಇದಕ್ಕಾಗಿ ಸೃಷ್ಟಿಕರ್ತನಿಗೆ ಕೃತಜ್ಞತೆ ಸಲ್ಲಿಸಿದರು.
ಫೌಂಡಶನ್ ಅಧ್ಯಕ್ಷ ಮುಹಮ್ಮದ್ ಫಾರೂಖ್ ಶೇಖ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ.ನಸೀಮ್ ಖಾನ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಶೌಕತ್ ಕತೀಬ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ನಝೀರ್ ಆಹ್ಮದ್ ಶೇಖ್ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಬಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಹಸೀನಾ ಬಾನು, ಜೆ.ಸಿ.ಐ ಅಧ್ಯಕ್ಷ ನಾಗರಾಜ್ ಶೇಟ್, ವಿಸನ್ ಮಿಷನ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅಮ್ಜದ್ ಅಲಿ ಶೇಖ್ ಮತ್ತಿತರರು ಉಪಸ್ಥಿತರಿದ್ದರು.