×
Ad

ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯಿಂದ‘ಆ್ಯಂಟಿಕ್ ಜ್ಯುವೆಲ್ಲರಿ ಫೆಸ್ಟ್’ ಉದ್ಘಾಟನೆ

Update: 2017-10-08 21:53 IST

ಮಂಗಳೂರು, ಅ. 8: ಕರ್ನಾಟಕ ಹಾಗೂ ಕೇರಳದಲ್ಲಿ ಮನೆ ಮಾತಾಗಿರುವ ಚಿನ್ನ ಮತ್ತು ವಜ್ರಾಭರಣಗಳ ಮಳಿಗೆ ‘ಸಿಟಿ ಗೋಲ್ಡ್’ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು ತನ್ನ ಮಂಗಳೂರಿನ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಶೋ ರೂಂನಲ್ಲಿ ‘ಆ್ಯಂಟಿಕ್ ಜುವೆಲ್ಲರಿ ಫೆಸ್ಟ್’ ಇಂದು ಉದ್ಘಾಟನೆಗೊಂಡಿತು.

‘ಆ್ಯಂಟಿಕ್ ಜ್ಯುವೆಲ್ಲರಿ ಫೆಸ್ಟ್’ನ್ನು ಎಚ್.ಎಚ್.ಗ್ರೂಪ್‌ನ ಅಧ್ಯಕ್ಷ ಉಂಞಿ ಹಾಜಿ ಉದ್ಘಾಟಿಸಿದರು. ನಂಡೆ ಪೆಂಙಳ್ ಸಮಿತಿಯ ಅಧ್ಯಕ್ಷ ಎ.ಎಚ್.ನೌಷಾದ್ ಹಾಜಿ ಸೂರಲ್ಪಾಡಿ ‘ಗೋಲ್ಡ್ ಆ್ಯಂಡ್ ಧಮಾಕ’ ವಿಭಾಗವನ್ನು ಉದ್ಘಾಟಿಸಿದರು.

ಅಬ್ದುಲ್ ಖಾದರ್ ದಮಾಮ್, ಅಬ್ದುಲ್ಲತೀಫ್ ಮದರ್ ಇಂಡಿಯಾ, ರವೀಂದ್ರ ಜಪ್ಪು, ಏರ್ ಇಂಡಿಯಾ ಉಸ್ಮಾನ್ ಹಾಜಿ, ಎಂ.ಜಿ.ಹಾಜಿ, ಅಬ್ದುಸ್ಸಲಾಂ ಬೂಟ್‌ಬಝಾರ್, ಮುಹಮ್ಮದ್ ಬೆಳ್ಚಾರ್, ಕರ್ನಾಟಕ ರಕ್ಷಣಾ ವೇದಿಕೆಯ ದ.ಕ. ಜಿಲ್ಲಾ ವಕ್ತಾರ ಮೊಹ್‌ಶಿರ್ ಅಹ್ಮದ್ ಸಾಮನಿಗೆ, ಶಿವಾನಂದ ಶೆಟ್ಟಿ ಕೊಡಿಯಾಲ್‌ಬೈಲ್, ಅಬ್ದುಲ್ ಖಾದರ್ ಹಳೆಯಂಗಡಿ, ಡೈಮಂಡ್ ಗ್ರೂಪ್ ದುಬೈ ಇದರ ನಿರ್ದೇಶಕ ಅಲ್ತಾಫ್ ಫರಂಗಿಪೇಟೆ, ಬೊಳ್ಳೂರ್ ಹಾಜಿ, ಮುಹಮ್ಮದ್ ಅಲಿ ಮದರ್ ಇಂಡಿಯಾ, ಬಿ.ಎಂ.ತುಂಬೆ, ಸಿಟಿ ಗೋಲ್ಡ್ ನಿರ್ದೇಶಕ ನೌಫಲ್ ಚೂರಿ, ಬ್ರಾಂಚ್ ಮುಖ್ಯಸ್ಥ ಅನ್ವರ್ ಸಾದಾತ್, ಉಪಸ್ಥಿತರಿದ್ದರು.

ವಿಶೇಷವೆಂದರೆ ಪ್ರತಿಯೊಂದು ಆ್ಯಂಟಿಕ್ ಜುವೆಲ್ಲರಿಯ ಮೇಕಿಂಗ್ ಚಾರ್ಜ್ ಮೇಲೆ ಶೇ.50 ಕಡಿತ ವಿದೆ. ಅಷ್ಟೇ ಅಲ್ಲ, ಪ್ರತಿಯೊಂದು ಆ್ಯಂಟಿಕ್ ಜುವೆಲ್ಲರಿ ಖರೀದಿಗೆ ಒಂದು ವಜ್ರದ ರಿಂಗ್ ಉಚಿತ ಕೊಡುಗೆಯಾಗಿ ಸಿಗಲಿದೆ.

ಕೊಡುಗೆಯು ಮಂಗಳೂರಿನ ಮಳಿಗೆಯ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಪ್ರತಿಯೊಂದು ಖರೀದಿಯ ಮೇಲೂ ಕಡಿಮೆ ಮಜೂರಿ ವಿಧಿಸಲಾಗುತ್ತಿದ್ದು, ಜೊತೆಗೆ ಬಹುಮಾನವೂ ಖಚಿತವಿದೆ ಎಂದು ಮಳಿಗೆಯ ಮುಖ್ಯಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News