×
Ad

ಜಯಪ್ರಕಾಶ್ ಶೆಟ್ಟಿ ಶಾಂತಿಗಾಗಿ ಪಾದಯಾತ್ರೆ ಅರ್ಧಕ್ಕೆ ಮೊಟಕು

Update: 2017-10-08 22:34 IST

ಉಡುಪಿ, ಆ.30: ಸಮಾಜಕ್ಕೆ ಶಾಂತಿಯ ಸಂದೇಶ ನೀಡುವ ನಿಟ್ಟಿನಲ್ಲಿ ಉಡುಪಿ ಕಡೆಕಾರಿನ ನಿವಾಸಿ ಜಯಪ್ರಕಾಶ್ ಶೆಟ್ಟಿ ಅ.2ರಿಂದ ಅ.31ರವರೆಗೆ ಗುಜರಾತಿನ ಸಬರಮತಿ ಆಶ್ರಮದಿಂದ ಮಹಾರಾಷ್ಟ್ರದ ವರ್ದಾ ಜಿಲ್ಲೆಯ ಸೇವಾಗ್ರಾಮದವರೆಗೆ ಹಮ್ಮಿಕೊಳ್ಳಲಾದ ಪಾದಯಾತ್ರೆಯನ್ನು ಅನಾರೋಗ್ಯ ಕಾರಣದಿಂದಾಗಿ ಅರ್ಧಕ್ಕೆ ಮೊಟಕುಗೊಳಿಸಿ ಅ.9ರಂದು ಗುಜರಾತಿನ ದಂಡಿ ಎಂಬಲ್ಲಿ ಕೊನೆಗೊಳಿಸಲಿದ್ದಾರೆ.

ಬೊಲೋ ವಂದೆ ಮಾತರಂ ಎನ್‌ಜಿಒ ಸಂಸ್ಥೆಯ ಜಯಪ್ರಕಾಶ್ ಶೆಟ್ಟಿ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಮೂಲಕ ಸುಮಾರು 850 ಕಿ.ಮೀ. ದೂರ ತ್ರಿವರ್ಣ ಧ್ವಜದೊಂದಿಗೆ ಪಾದಯಾತ್ರೆ ನಡೆಸುವ ಉದ್ದೇಶದೊಂದಿಗೆ ಗಾಂಧೀಜಿ ಜಯಂತಿಯಂದು ಸಬರಮತಿ ಆಶ್ರಮದಿಂದ ಪಾದಯಾತ್ರೆ ಹೊರಟಿದ್ದರು. ಅವರು ಈ ಪಾದಯಾತ್ರೆಯನ್ನು ಅ.30ರ ಇಂದಿರಾಗಾಂಧಿ ಸ್ಮತಿ ದಿನಾಚರಣೆಯಂದು ಕೊನೆಗೊಳಿಸುವ ಸಂಕಲ್ಪ ಹೊಂದಿದ್ದರು.

‘ಪಾದಯಾತ್ರೆಯ ಮಾರ್ಗ ಮಧ್ಯೆ ಮಲೇರಿಯಾ ಕಾಣಿಸಿಕೊಂಡ ಹಿನ್ನೆಲೆ ಯಲ್ಲಿ ಈ ಪಾದಯಾತ್ರೆಯನ್ನು 400ಕಿ.ಮೀ.ಗೆ ಮೊಟಕುಗೊಳಿಸಿ ಅ.9ರಂದು ಸಂಜೆ ವೇಳೆ ಗುಜರಾತಿನ ದಂಡಿಯಾತ್ರೆ ನಡೆದ ಸ್ಥಳಕ್ಕೆ ತೆರಳಲಿದ್ದೇನೆ. ಈ ಮೂಲಕ ದಂಡಿ ಮಾರ್ಚ್ ಹೆಸರಿನಲ್ಲಿ ಈ ಪಾದಯಾತ್ರೆ ಅರ್ಧಕ್ಕೆ ಕೊನೆಗೊಳಿ ಸಲಿದ್ದೇನೆ. ಕಳೆದ ಏಳು ದಿನಗಳಿಂದ ಪ್ರತಿ ದಿನ 40-45ಕಿ.ಮೀ. ದೂರ ಪಾದ ಯಾತ್ರೆ ಮಾಡುತ್ತಿದ್ದೆ ಎಂದು ಜಯಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News