×
Ad

ಗಾಂಜಾ ಸೇವನೆ: ನಾಲ್ವರ ಬಂಧನ

Update: 2017-10-08 22:35 IST

ಮಣಿಪಾಲ, ಅ.8: ಸರಳೆಬೆಟ್ಟು ಹೈ ಪಾಯಿಂಟ್ ಅಪಾರ್ಟ್‌ಮೆಂಟ್ ಕಂಪೌಂಡ್ ಬಳಿ ಅ.7ರಂದು ಸಂಜೆ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಮಣಿಪಾಲದ ವಿದ್ಯಾರ್ಥಿಗಳಾದ ಡೇನಿಯಲ್ ಜೆ.(21), ಸಿದ್ದಾರ್ಥ ರಜ ಪೂತ್(22), ಆಸೀಂ ಮೊಹಮ್ಮದ್ ಮುಸ್ತಫಾ(24) ಎಂಬವರನ್ನು ಮಣಿಪಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಪು: ಕಟಪಾಡಿಯ ಪಳ್ಳಿಗುಡ್ಡೆ ಮೈದಾನದ ಬಳಿ ಅ.7ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಗಾಂಜಾ ಸೇವನೆ ಮಾಡುತ್ತಿದ್ದ ಉಬೇದುಲ್ಲಾ ಎಂಬಾತ ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News