ಬೆಂಕಿ ಆಕಸ್ಮಿಕ: ಮಹಿಳೆ ಮೃತ್ಯು
Update: 2017-10-08 22:36 IST
ಕಾರ್ಕಳ, ಅ.8: ಬೆಂಕಿ ಆಕಸ್ಮಿಕದಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಸೆ.7ರಂದು ಮುಡಾರು ಗ್ರಾಮದ ಮುದಲಾಕ್ಯಾರು ಎಂಬಲ್ಲಿ ನಡೆದಿದೆ.
ಮೃತರನ್ನು ಮುದಲಾಕ್ಯಾರು ನಿವಾಸಿ ಗೋಪಾಲ ದೇವಾಡಿಗ ಎಂಬವರ ಪತ್ನಿ ಸುಶೀಲ(75) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಓಲೆಯ ಬೆಂಕಿ ಬಟ್ಟೆಗೆ ತಾಗಿತು. ಇದರಿಂದ ಸುಟ್ಟ ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಸಂಜೆ 7.15ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.