ಮಟ್ಕಾ: ಐವರ ಬಂಧನ
Update: 2017-10-08 22:37 IST
ಉಡುಪಿ, ಅ.8: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.7 ರಂದು ಮಟ್ಕಾ ದಂಧೆಗೆ ಸಂಬಂಧಿಸಿದಂತೆ ಒಟ್ಟು ಐದು ಮಂದಿಯನ್ನು ಪೊಲೀಸು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುತೋನ್ಸೆ ಗ್ರಾಮದ ಬಳಿ ಗುಜ್ಜರಬೆಟ್ಟುವಿನ ಸದಾನಂದ(60) ಹಾಗೂ ಮಲ್ಪೆ ಬಂದರಿನ ಒಳಗೆ ಹೋಗುವ ಮುಖ್ಯ ಗೇಟಿನ ಬಳಿ ಕುಂದಾಪುರ ರಟ್ಟಾಡಿಯ ಕಿರಣ್(30), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆರ್ಗಾಲ್ ಗ್ರಾಮದ ಬಳಿ ನಾಡದ ಗಣೇಶ(45), ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಕಂಚಗೋಡು ಮಾಚಿಮನೆ ಎಂಬಲ್ಲಿ ಸ್ಥಳೀಯ ನಿವಾಸಿ ಚಂದ್ರ(47) ಮತ್ತು ಗುಜ್ಜಾಡಿ ಶಾಲೆಯ ಬಳಿ ಸುರೇಂದ್ರ ಪಾಪಣ್ಣ ಶೇರೆಗಾರ(40) ಎಂಬವರನ್ನು ಪೊಲೀಸರು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ.