ಯುವಕನ ಅಪಹರಣ: ದೂರು ದಾಖಲು
Update: 2017-10-08 22:38 IST
ಮಂಗಳೂರು, ಅ. 8: ಗುಂಪೊಂದು ಯುವಕನೋರ್ವನನ್ನು ಅಪಹರಿಸಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೃಷ್ಣಾಪುರ 8ನೆ ಬ್ಲಾಕ್‌ನ ಸಫ್ವಾನ್ (24) ಅಪಹಣಕ್ಕೊಳಗಾಗಿದ್ದಾರೆ. ಆರೋಪಿಗಳಾದ ಸಫ್ವಾನ್, ಶಂಶುದ್ದೀನ್ ಮತ್ತಿತರರು ಸಫ್ವಾನ್‌ನನ್ನು ಅಪಹರಿಸಿದ್ದಾರೆ ಎಂದು ಅಬ್ದುಲ್ ಹಮೀದ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.