ಮಹಿಳಾ ಕಾಂಗ್ರೆಸ್‌ನಿಂದ ಅರಸಿನ ಕುಂಕುಮ ಕಾರ್ಯಕ್ರಮ
ಮಂಗಳೂರು, ಅ.8: ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸಿನಿಂದ ಮನೆ ಮನೆಗೆ ಅರಸಿನ ಕುಂಕುಮ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಇದರೊಂದಿಗೆ ಸರಕಾರದ ಕಾರ್ಯಕ್ರಮವನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕೂಡ ಮಾಡಲಾಯಿತು. ಮಂಗಳಾದೇವಿಯ ಅಸುಪಾಸಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಸರಕಾರದ ಹಾಗೂ ಪಕ್ಷದ ಸಾಧನೆಗಳ ಕಿರು ಪುಸ್ತಕವನ್ನು ವಿತರಿಸಲಾಯಿತು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಕಾರ್ಯಕ್ರಮ ಉದ್ಘಾಟಿಸಿದರು. ಬ್ಲಾಕ್ ಅಧ್ಯಕ್ಷೆ ನಮಿತಾ ಡಿ. ರಾವ್ ನೇತೃತ್ವ ವಹಿಸಿದ್ದರು. ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಅಪ್ಪಿ, ಮಾಜಿ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಡಿಸಿಸಿ ಸದಸ್ಯೆ ಶೋಭಾ ಕೇಶವ, ಪರಿಶಿಷ್ಥ ಜಾತಿ/ಪಂಗಡದ ಅಧ್ಯಕ್ಷೆ ವಿಜಯಾ ಲಕ್ಷ್ಮೀ, ನಗರಪಾಲಿಕಾ ಸದಸ್ಯೆ ಆಶಾ ಡಿಸಿಲ್ವಾ, ಕೋಶಾಧಿಕಾರಿ ಸರಳಾ ಕರ್ಕೇರ, ಗೀತಾ ಪ್ರವೀಣ್, ಜ್ಯೋತಿ ಬಜಾಲ್, ಸುಜಾತಾ ಅಹಲ್ಯ, ಕವಿತಾ ಶೆಟ್ಟಿ, ವಿಕ್ಟೋರಿಯ ಮಸ್ಕರೇನ್ಹಸ್, ಗೀತಾ ಸುವರ್ಣ, ಮೇಬಲ್ ನೊರೊನ್ಹ, ಲವಿನಾ, ಮಾಲತಿ ಕುಂದರ್, ಸ್ಮಿತಾ, ಬೆನಡಿಕ್ಟ್ ಡಿಸೋಜ, ಪರಿಣಿತ ಕರ್ಕೇರ, ಅಮಿತಾ, ಸುರೇಖಾ ಕರ್ಕೇರಾ ಉಪಸ್ಥಿತರಿದ್ದರು.