×
Ad

ಅ.11ರಂದು ‘ಅನುಕ್ತ’ ಕನ್ನಡ ಚಲನಚಿತ್ರಕ್ಕೆ ಮೂಹುರ್ತ

Update: 2017-10-09 23:59 IST

ಉಡುಪಿ, ಅ.9: ದೇಯಿ ಪ್ರೊಡಕ್ಷನ್ ನಿರ್ಮಾಣದ ‘ಅನುಕ್ತ’ ಕನ್ನಡ ಚಲನ ಚಿತ್ರದ ಮುಹೂರ್ತ ಕಾರ್ಯಕ್ರಮವು ಅ.11ರಂದು ಬೆಳಗ್ಗೆ 9:30ಕ್ಕೆ ಕಟಪಾಡಿ ಮೂಡಬೆಟ್ಟು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣವು ಮೂಡಿಗೆರೆ, ಮಡಿಕೇರಿ, ಹೆಬ್ರಿ, ಬ್ರಹ್ಮಾವರ, ಮಂಗಳೂರು ಹಾಗೂ ಉಡುಪಿ ಸುತ್ತಮುತ್ತ ಪ್ರದೇಶದಲ್ಲಿ ನಡೆಯಲಿದೆ. ಮುಂದಿನ ಮಾರ್ಚ್‌ನಲ್ಲಿ ಸಿನೆಮಾ ಬಿಡುಗಡೆ ಮಾಡುವ ಉದ್ದೇಶವನ್ನು ಹೊಂದಲಾಗಿದೆಂದು ಚಿತ್ರದ ನಿರ್ದೇಶಕ ಅಶ್ವಥ್ ಸ್ಯಾಮುವೆಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ನಿರ್ಮಾಪಕ ದುಬೈಯ ಉದ್ಯಮಿ ಹರೀಶ್ ಬಂಗೇರ ಅವರ ಚೊಚ್ಚಲ ಸಿನೆಮಾ ಇದಾಗಿದ್ದು, ಮನೋಹರ್ ಜೋಷಿ ಛಾಯಾಗ್ರಾಹಣ, ಸಂತೋಷ್ ಕುಮಾರ್ ಕೊಂಚಾಡಿ ಕಥೆ, ನವೀನ್ ಶರ್ಮ ಸಂಭಾಷಣೆ, ಎನ್.ಎಂ. ವಿಶ್ವ ಸಂಕಲನ, ಕೀರ್ತನ್ ಭಂಡಾರಿ ಸಾಹಿತ್ಯ, ನೊಬಿನ್ ಪೌಲ್ ಸಂಗೀತ ನೀಡಿ ದ್ದಾರೆ. ಕಾರ್ತಿಕ್ ಅತ್ತಾವರ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಶೋಕ್ ಸುವರ್ಣ, ನಿರ್ಮಾಪಕ ಹರೀಶ್ ಬಂಗೇರ, ನಟ ಕಾರ್ತಿಕ್ ಅತ್ತಾವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News