ಸೌಲಭ್ಯ ಪಡೆಯಲು ವಿಳಂಬ ಮಾಡಬಾರದು: ಶಾಸಕ ಜೆ.ಆರ್.ಲೋಬೊ
ಮಂಗಳೂರು, ಅ.11: ಸರಕಾರವು ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಪಡೆಯುವಲ್ಲಿ ವಿಳಂಬ ಮಾಡಬಾರದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ನಗರದ ಬಲ್ಮಠ ಶಾಂತಿ ಕೆಥೋಡ್ರಲ್‌ನಲ್ಲಿ ದ.ಕ.ಜಿಲ್ಲಾ ಅಲ್ಪಸಂಖ್ಯಾತರಿಗಾಗಿ ಸರಕಾರಿ ಯೋಜನೆ ಹಾಗೂ ಸೌಲಭ್ಯಗಳ ಕುರಿತ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರಕಾರ ಅಲ್ಪಸಂಖ್ಯಾತರಿಗಾಗಿ ವಿವಿಧ ಯೋಜನೆಯನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಈ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ವಿಳಂಬ ಮಾಡಬಾರದು ಎಂದ ಜೆ.ಆರ್. ಲೋಬೊ, ಸರಕಾರ ಕೊಡಮಾಡಿದ ಈ ಯೋಜನೆಗಳನ್ನು ಪಡೆದು ಜೀವನವನ್ನು ಹದಗೊಳಿಸಿಕೊಳ್ಳಬೇಕು ಎಂದರು.
ಧರ್ಮಗುರುಗಳಾದ ರಾಬಿನ್ಸನ್ ಬರ್ನಾಬಸ್, ರೆ.ಅಬ್ನೆಸ್ ಜತನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮುಡಾ ಸದಸ್ಯರಾದ ವಸಂತ್ ಬರ್ನಾಡ್, ಮನಪಾ ಸದಸ್ಯ ನವೀನ್ ಡಿಸೋಜ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ, ಪದ್ಮನಾಭ, ಶಾಂತಿ ಅಮ್ಮಣ್ಣ ಉಪಸ್ಥಿತರಿದ್ದರು.
ಸೌಲಭ್ಯಗಳ ಕುರಿತು ಮುಹಮ್ಮದ್ ಫಾರೂಕ್ ಮಾಹಿತಿ ನೀಡಿದರು.