×
Ad

‘ಕೂಸಮ್ಮ ಆನಿ ಹೆರ್’ ಕಥಾ ಕೃತಿ ಬಿಡುಗಡೆ

Update: 2017-10-11 19:42 IST

ಮಂಗಳೂರು, ಅ.11: ಕರ್ನಾಟಕದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾಲ್ಸ್ ಲೋಬೋ ಅವರ ‘ಕೂಸಮ್ಮ ಆನಿ ಹೆರ್ ಕಥಾ’ ಎನ್ನುವ ಕೊಂಕಣಿ ಸಣ್ಣ ಕತೆಗಳ ಕೃತಿಯನ್ನು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಬೆಂದುರ್‌ವೆಲ್ ಚರ್ಚಿನ ಧರ್ಮಗುರು ಫಾ. ಆ್ಯಂಡ್ರು ಡಿ ಸೋಜ ಬಿಡುಗಡೆ ಮಾಡಿದರು.

ಇಂತಹ ಕೃತಿಗಳು ಕೊಂಕಣಿಯಲ್ಲಿ ಬರುವ ಮೂಲಕ ಕೊಂಕಣಿ ಸಾಹಿತ್ಯ ಕೃಷಿ ಶ್ರೀಮಂತವಾಗುತ್ತದೆ. ಇಂತಹ ಬರೆಯುವವರು ಹೆಚ್ಚಾದರೆ ಸಾಹಿತ್ಯ ರಂಗ ಸಮೃದ್ಧವಾಗುತ್ತದೆ. ಬರೆಯುವ ಮಂದಿಗೂ ಇದೊಂದು ಪ್ರೇರಣೆ ನೀಡುವಂತಹ ಕಾರ್ಯವಾಗಲಿದೆ. ಓದುಗರು ಇಂತಹ ಕೃತಿಗಳ ಖರೀದಿ ಮಾಡಿ ಲೇಖಕರನ್ನು ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭ ಸಾಹಿತಿ ಡೊಲಿ ಕಾಸ್ಸಿಯಾ, ಮೆಕ್ಸಿಂ ಪಿಂಟೊ, ಅಂಚೆ ಇಲಾಖೆಯ ಅಧಿಕಾರಿ ಜೋಸೆಫ್  ರಾಡ್ರಿಗಸ್, ಫೋರ್ ವಿಂಡ್ಸ್‌ನ ಮಾಲಕ ಎಲಿಯಾಸ್ ಫೆರ್ನಾಂಡೀಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News