ಅ.13ರಿಂದ ‘ತುಳು ಕಲಿಕಾ ತರಗತಿ’ ಆರಂಭ
Update: 2017-10-11 19:42 IST
ಮಂಗಳೂರು, ಅ.11: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ‘ಬಲೇ ತುಳು ಕಲ್ಪುಗ’ ಯೋಜನೆಯಡಿ ತುಳು ಬಾರದವರಿಗೆ ತುಳು ಮಾತನಾಡಲು ಕಲಿಸುವ ಸಲುವಾಗಿ ಅ.13ರಿಂದ ಸಂಜೆ 4ಕ್ಕೆ ಅಕಾಡಮಿಯ ‘ಸಿರಿಚಾವಡಿ’ಯಲ್ಲಿ ತುಳು ತರಗತಿಯ ಉದ್ಘಾಟನಾ ಕಾರ್ಯಕ್ರಮ ಜರಗಲಿದೆ.
ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಶಾಸಕ ಜೆ.ಆರ್.ಲೋಬೊ ತುಳು ತರಗತಿ ಉದ್ಘಾಟಿಸಲಿದ್ದಾರೆ.ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ, ಕಾರ್ಪೋರೇಟರ್ ರಾಧಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ತುಳು ಮಾತನಾಡಲು ಕಲಿಯಲಿಚ್ಚಿಸುವ ಆಸ್ತಕರು ಅಕಾಡಮಿಯ ಮೊ.ಸಂ: 9901016962ನ್ನು ಸಂಪರ್ಕಿಸಬಹುದು ಎಂದು ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಮನವಿ ಮಾಡಿದ್ದಾರೆ.