ಅ.17ರಂದು ನಗರಸಭೆಗೆ ಮುತ್ತಿಗೆ
Update: 2017-10-11 20:46 IST
ಉಡುಪಿ, ಅ.11: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ನಗರಸಭಾ ವ್ಯಾಪ್ತಿಯ ಬಡನಿವೇಶನ ರಹಿತ ಅರ್ಜಿದಾರರು ಭೂಮಿ ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಅ.17ರಂದು ಬೆಳಗ್ಗೆ 11ಗಂಟೆಗೆ ಬನ್ನಂಜೆ ಶ್ರೀನಾರಾಯಣಗುರು ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ನಗರಸಭಾ ಕಚೇರಿಗೆ ಮುತಿ್ತಗೆ ಹೋರಾಟವನ್ನು ಆಯೋಜಿಸಲಾಗಿದೆ.
ಆಯ್ಕೆಯಾದ ಎ ಪಟ್ಟಿಯಲ್ಲಿರುವ, ಭೂಮಿ ಹೊಂದಿಲ್ಲದ, ಬಾಡಿಗೆ ಮನೆ ಯಲ್ಲಿ ವಾಸಿಸುತ್ತಿರುವ 316 ಮಂದಿ ಗ್ರಾಪಂ, ನಗರಸಭಾ ವ್ಯಾಪ್ತಿಯ 596 ಮಂದಿ ಸೇರಿದಂತೆ ಒಟ್ಟು 911 ಮಂದಿಗೆ ಶೀಘ್ರ ನಿವೇಶನ ಹಂಚಿಕೆ ಭರವಸೆ ಈಡೇರಿಸಬೇಕು ಎಂದು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.