ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷರಿಗೆ ತರಬೇತಿ ಕಾರ್ಯಾಗಾರ
ಉಡುಪಿ, ಅ.11: ರಾಜ್ಯ ಸರಕಾರ ಸ್ತ್ರೀಶಕ್ತಿ ಒಕ್ಕೂಟಗಳ ಆರ್ಥಿಕ ಸಬಲೀ ಕರಣಕ್ಕಾಗಿ ಆರಂಭಿಸಿರುವ ಸವಿರುಚಿ ಸಂಚಾರಿ ಕ್ಯಾಂಟೀನ್ ಯೋಜನೆಯನ್ನು ಒಕ್ಕೂಟಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದರೆ ಅದರಿಂದ ಒಕ್ಕೂಟಗಳಿಗೆ ಹಾಗೂ ಗ್ರಾಹಕರಿಗೆ ಒಳ್ಳೆಯ ಪ್ರಯೋಜನವಾಗಲಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಹೇಳಿದ್ದಾರೆ.
ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ, ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾದ ಸ್ತ್ರೀಶಕ್ತಿ ಒಕ್ಕೂಟ ಗಳ ಅಧ್ಯಕ್ಷರುಗಳ ತರಬೇತಿ ಕಾರ್ಯಾಗಾರವನ್ನು ಉಧ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಆಡಳಿತ ಮಂಡಳಿಯ ಜತೆಕಾರ್ಯದರ್ಶಿ ಡಾ.ಎಂ.ಆರ್.ಹೆಗಡೆ ವಹಿಸಿ ದ್ದರು. ಮುಖ್ಯ ಅತಿಥಿಯಾಗಿ ಪಿಐಎಂನ ನಿರ್ದೇಶಕ ಡಾ.ಭರತ್ ವಿ. ಮಾತ ನಾಡಿದರು. ಡಾ.ನವೀನ್ ಕುಮಾರ್, ಸಂತೋಷ್ ಪ್ರಭು, ಶಶಾಂಕ್, ಅವಿನಾಶ್, ರಮ್ಯಾ ತರಬೇತಿ ನೀಡಿದರು.
ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರದ ಸಂಯೋಜಕ ಡಾ.ಕೃಷ್ಣ ಕೊತಾಯ ಸ್ವಾಗತಿಸಿದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ನಾಯಕ್ ವಂದಿಸಿದರು.