×
Ad

ಸಾವಯವ ರೈತರನ್ನು ಪ್ರೋತ್ಸಾಹಿಸಲು ಸಾವಯವ ಸಂತೆ

Update: 2017-10-11 23:07 IST

ಉಡುಪಿ, ಅ.11: ಜಿಲ್ಲೆಯು ಪ್ಲಾಸ್ಟಿಕ್ ಮುಕ್ತ, ಡಂಪಿಂಗ್‌ಯಾರ್ಡ್ ಮುಕ್ತ ಆಗುವುದರೊಂದಿಗೆ ಜಿಲ್ಲೆಯ ಜನರ ಆರೋಗ್ಯಕ್ಕೆ ಪೂರಕವಾಗುವಂತೆ ಸಾವಯವ ವಸ್ತುಗಳ ಬಳಕೆಗೆ ಪ್ರೇರೇಪಿಸಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳೊಂದಿಗೆ ಸಾವಯವ ಕೃಷಿಕ ಸಂಘಗಳ ಪ್ರಾಂತೀಯ ಒಕ್ಕೂಟದ ಸಹಬಾಗಿತ್ವದಲ್ಲಿ ಶಾಶ್ವತ ಸಾವಯವ ಮಾರುಕಟ್ಟೆ ರಚಿಸಲು ಮುನ್ನುಡಿಯಾಗಿ ಅ.15ರಂದು ದೊಡ್ಡಣ್ಣಗುಡ್ಡೆ ರೈತ ಸೇವಾ ಕೇಂದ್ರದಲ್ಲಿ ಸಾವಯವ ಸಂತೆಯನ್ನು ಆಯೋಜಿಸಲಾಗಿದೆ.

 ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಂತೋನಿ ಮರಿಯಾ ಇಮಾನ್ಯುಯಲ್, ಸಾವಯವ ಆಹಾರ ಉತ್ಪಾದನೆಗೆ ಸಂಬಂಧಿಸಿದಂತೆ ವಿವರಣೆ ನೀಡಿ ಜಿಲ್ಲೆ ಕಳೆದ ಮೂರು ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಸಾವಯವ ಆಹಾರವನ್ನು ದೃಢೀಕರಿಸಿ ನೀಡುವ ಬಗ್ಗೆಯೂ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಬೀಜ ಮತ್ತು ಸಾವಯವ ದೃಡೀಕರಿಸುವ ಏಜೆನ್ಸಿ ದೃಢೀಕರಣವನ್ನು ನೀಡಲಿದ್ದು ಈ ಪ್ರಕ್ರಿಯೆಗೆ ಮೂರು ವರ್ಷ ಕಾಲಾವಕಾಶ ಬೇಕಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಂತೋನಿ ಮರಿಯಾ ಇಮಾನ್ಯುಯಲ್, ಸಾವಯವ ಆಹಾರ ಉತ್ಪಾದನೆಗೆ ಸಂಬಂಧಿಸಿದಂತೆ ವಿವರಣೆ ನೀಡಿ ಜಿಲ್ಲೆ ಕಳೆದ ಮೂರು ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಸಾವಯವ ಆಹಾರವನ್ನು ದೃಢೀಕರಿಸಿ ನೀಡುವ ಬಗ್ಗೆಯೂ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಬೀಜ ಮತ್ತು ಸಾವಯವ ದೃಡೀಕರಿಸುವ ಏಜೆನ್ಸಿ ದೃಢೀಕರಣವನ್ನು ನೀಡಲಿದ್ದು ಈ ಪ್ರಕ್ರಿಯೆಗೆ ಮೂರು ವರ್ಷ ಕಾಲಾವಕಾಶ ಬೇಕಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾವಯವ ಆಹಾರೋತ್ಪನ್ನಕ್ಕೆ 100 ಹೆಕ್ಟೇರ್‌ನಷ್ಟು ಭೂಮಿಯನ್ನು ಗುರುತಿಸಲಾಗಿದ್ದು, ಉಡುಪಿ ಮತ್ತು ಕುಂದಾಪುರ ವ್ಯಾಪ್ತಿಯ ಆರು ಗ್ರಾಮಗಳಲ್ಲಿ ಸಾವಯವ ಕೃಷಿಯನ್ನು ನಡೆಸಲಾಗುತ್ತಿದೆ. ಸಾವಯವ ಕೃಷಿಯೆಂದು ದೃಢೀಕರಿಸಲು ಮೂರು ಹಂತದ ದಾಖಲೆಗಳನ್ನು ಸಿದ್ದಪಡಿಸ ಲಾಗಿದೆ. 15ರಂದು ನಡೆಯುವ ಸಂತೆಯನ್ನು ಅವಲೋಕಿಸಿ ಕ್ಷೇತ್ರ ವಿಸ್ತರಣೆಗೆ, ಕೃಷಿಕರಿಗೆ ಉತ್ತೇಜನ ನೀಡಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ದೊಡ್ಡಣಗುಡ್ಡೆಯಲ್ಲಿ ಒಟ್ಟು 10ರಿಂದ 15 ಮಳಿಗೆಗಳಲ್ಲಿ ವಿವಿಧ ಉತ್ಪನ್ನಗಳು ದೊರೆಯಲಿದ್ದು, 500ರಿಂದ 1000 ಸಾವಯವ ಬೆಳೆಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರತೀ ರವಿವಾರದಂದು ಬೆಳಗ್ಗೆ 8:30ರಿಂದ 12:30ರವರೆಗೆ ಈ ಸಂತೆ ನಡೆಯಲಿದ್ದು ಇದರ ಮುಖ್ಯ ಉದ್ದೇಶ ಗ್ರಾಹಕರಿಗೆಉತ್ತಮ ಆಹಾರ, ರೈತರಿಗೆ ಮಾರುಕಟ್ಟೆ ಒದಗಿಸುವುದಾಗಿದೆ.

ಸಾವಯವ ಸಂತೆಯಲ್ಲಿ ಮುಖ್ಯವಾಗಿ ವಿವಿಧ ಜಿಲ್ಲೆಗಳ ಬೇರೆ ಬೇರೆ ಉತ್ಪನ್ನ ಗಳು ದೊರೆಯಲಿದ್ದು, ರಾಜಮುಡಿ, ಕೆಂಪಕ್ಕಿ, ಸಣ್ಣವಳ್ಳಿ, ಸೋನ, ಕುಚ್ಚಲಕ್ಕಿ ಮುಂತಾದ ವಿವಿಧ ಬಗೆಯ ಸಾವಯವ ಅಕ್ಕಿ ದೊರೆಯಲಿದೆ. ವಿವಿಧ ಬಗೆಯ ತರಕಾರಿ ಟೊಮ್ಯಾಟೋ,ಟೊಮ್ಯಾಟೋ ಹೈಬ್ರಿಡ್, ಹಸಿರು ಮೆಣಸಿನಕಾಯಿ, ತೊಂಡೆಕಾಯಿ,ಹೀರೇಕಾಯಿ, ಬದನೆ, ಗುಂಡು ಬದನೆ, ಬೀನ್ಸ್ ಹೈಬ್ರೀಡ್, ಕುಂಬಳ ಮುಂತಾದ ತರಕಾರಿಗಳು, ಚಿಕ್ಕು, ಹೆಬ್ಬಲಸು, ಪಚ್ಚಬಾಳೆ, ಪುಟ್‌ಬಾಳೆ, ರಸಬಾಳೆ, ಲಿಂಬೆ, ದಾಳಿಂಬೆ ಮುಂತಾದ ಹಣ್ಣುಗಳು ದೊರೆಯಲಿವೆ.

ಸಾವಯವ ಸಂತೆಯು ಸಿರಿಧಾನ್ಯಗಳನ್ನು ಉತ್ತೇಜಿಸುವ ಉದ್ದೇಶವನ್ನು ಕೂಡ ಹೊಂದಿದ್ದು ಸಿರಿಧಾನ್ಯಗಳಾದ ಸಾಮೆ, ನವಣೆ, ಹಾರಕ, ಸಜ್ಜೆ, ಬೆರಗು, ಊದಲು, ರಾಗಿ ಹಾಗೂ ಅವುಗಳ ವೌಲ್ಯವರ್ಧಿತ ಉತ್ಪನ್ನಗಳು ಲಭಿಸಲಿವೆ. ಸಾಂಬಾರ ಪದಾರ್ಥಗಳಾದ ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ, ಮೆಣಸು, ಶುಂಠಿ, ಅರಶಿಣ, ಏಲಕ್ಕಿ, ಚಕ್ಕೆ ಸಹ ಇಲ್ಲಿ ದೊರೆಯಲಿದೆ.

ಇತರ ಉತ್ಪನ್ನಗಳಾದ ಅವಲಕ್ಕಿ, ಬಿಳಿಅವಲಕ್ಕಿ, ಕೆಂಪು ಅವಲಕ್ಕಿ, ಬೇಳೆಕಾಳು ಗಳು, ಸಾವಯವ ಬೆಲ್ಲ, ಸಾವಯವ ಸಕ್ಕರೆ, ಜೇನುತುಪ್ಪ, ಒಣ ಹಣ್ಣುಗಳಾದ ಒಣ ಖರ್ಜೂರ, ಬಾದಾಮಿ, ಒಣ ಖರ್ಜೂರ ಹಾಗೂ ಗೋಡಂಬಿ ಈ ಸಂತೆಯಲ್ಲಿ ಲ್ಯವಾಗಲಿದೆ ಎಂದವರು ತಿಳಿಸಿದ್ದಾರೆ.
ಉದ್ಘಾಟನೆ: ಜಿಲ್ಲಾ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲಾ ಸಾವಯವ ಕೃಷಿಕರ ಸಂಘಗಳ ಪ್ರಾಂತೀಯ ಒಕ್ಕೂಟ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾವಯವ ಸಂತೆ ಉದ್ಘಾಟನಾ ಕಾರ್ಯಕ್ರಮ ಅ.15ರಂದು ಬೆಳಗ್ಗೆ 11 ಗಂಟೆಗೆ ದೊಡ್ಡನಗುಡ್ಡೆ ಶಿವಳ್ಳಿ ತೋಟಗಾರಿಕಾ ಕ್ಷೇತ್ರದ ರೈತಸೇವಾ (ಪುಷ್ಪ ಹರಾಜು) ಕೇಂದ್ರದ ಆವರಣದಲ್ಲಿ ನಡೆಯಲಿದೆ. ಸಂತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News