×
Ad

ಬಾರ್‌ನಲ್ಲಿ ಕುಡಿದು ದಾಂಧಲೆ: ದೂರು

Update: 2017-10-11 23:17 IST

ಉಡುಪಿ, ಅ.11: ಉಡುಪಿ ಪಂಚರತ್ನ ಬಾರಿನಲ್ಲಿ ಅ.10ರಂದು ರಾತ್ರಿ ವೇಳೆ ಮದ್ಯ ಸೇವಿಸಿ ಗಲಾಟೆ ಮಾಡಿದ ಇಬ್ಬರು ಬಾರ್ ಮಾಲಕರಿಗೆ ತಲಾವರಿನಿಂದ ಹಲ್ಲೆಗೆ ಯತ್ನಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಬೈಲಕೆರೆಯ ಕಿರಣ್ ಹಾಗೂ ಇತರ ಇಬ್ಬರು ಬಾರ್‌ನಲ್ಲಿ ಮದ್ಯ ಪಾನ ಸೇವಿಸಿ ಬಳಿಕ ಹಣ ನೀಡುವುದಿಲ್ಲ ಎಂದು ಗಲಾಟೆ ಮಾಡಿದ್ದು, ಕೆಲ ಸಮಯದ ನಂತರ ತಲವಾರು ಹಿಡಿದುಕೊಂಡು ಬಂದ ಅವರು ಬಾರ್‌ನ ಮಾಲಕ ಸಂತೋಷ್ ಶೆಟ್ಟಿಯನ್ನು ಕಡಿಯಲು ಬಂದಾಗ ಇತರ ಕೆಲಸಗಾರರು ತಡೆದಿದ್ದರು. ಈ ಘಟನೆಯಿಂದ ಆಘಾತಗೊಂಡಿರುವ ಬಾರ್ ಮಾಲಕ ಸಂತೋಷ್ ಶೆಟ್ಟಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಗಾಯಗೊಂಡ ಕೆಲಸಗಾರ ಮಂಜುನಾಥ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರತಿದೂರು: ಕಿರಣ್ ಕುಮಾರ್ ತನ್ನ ಸ್ನೇಹಿತ ಅನ್ವರ್‌ನೊಂದಿಗೆ ಪಂಚರತ್ನ ಬಾರ್‌ನಲ್ಲಿಕುಡಿದು ಹೊರಗೆ ಬರುವಾಗ ಬಾರಿನ ಮಾಲಕ ಸಂತೋಷ್ ಮತ್ತು ಸುಜೀತ್ ಹಾಗೂ ಅವರ ಸಿಬ್ಬಂದಿ ರಾಡ್ ಮತ್ತು ಮರದ ತುಂಡಿ ನಿಂದ ಹಾಗೂ ಅಡುಗೆ ಕೋಣೆಯಲ್ಲಿದ್ದ ತಂದ ಚೂರಿಯಿಂದ ಇರಿದು ಕೊಲೆ ಮಾಡಲು ಪ್ರಯತ್ನಪಟ್ಟಿದ್ದು, ಈ ವೇಳೆ ಕಿರಣ್‌ರ ಸರ, ಉಂಗುರ, ಮೊಬೈಲ್ ಕಿತ್ತುಕೊಂಡು ಅನ್ವರ್‌ಗೆ ಹಲ್ಲೆ ನಡೆಸಿ 20ಸಾವಿರ ಹಣ ಕಸಿದುಕೊಂಡಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರತಿದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News