ಅ.14: ಎಸ್ಪಿಯಿಂದ ಫೋನ್‌ಇನ್ ಕಾರ್ಯಕ್ರಮ
ಉಡುಪಿ, ಅ.13: ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸಾಪ್ತಾಹಿಕ ನೇರ ಫೋನ್ ಇನ್ ಕಾರ್ಯಕ್ರಮ ಅ.14ರಂದು ಬೆಳಗ್ಗೆ 10ರಿಂದ 11ರವರೆಗೆ ನಡೆಯಲಿದೆ.
ಇದರಲ್ಲಿ ಎಸ್ಪಿ ಅವರು ಸಾರ್ವಜನಿಕರೊಂದಿಗೆ ನೇರವಾಗಿ ಮಾತನಾಡಿ, ಅವರುಗಳ ಅಹವಾಲುಗಳ ನಿವಾರಣೆಗಾಗಿ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ನೇರ ಫೋನ್‌ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದವರ ವಿವರನ್ನು ಗುಪ್ತವಾಗಿ ಇಡಲಾಗುವುದು.
ಸಾರ್ವಜನಿಕರು ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ತಿಳಿಸಬಹುದು. ಪೊಲೀಸ್ ಇಲಾಖಾ ಕರ್ತವ್ಯಕ್ಕೆ ಸಂಬಂಧ ಪಟ್ಟ ಸಲಹೆ, ದೂರು ಅಥವಾ ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮಾಹಿತಿ ಅಥವಾ ತಮ್ಮ ಹಿಂದಿನ ಅರ್ಜಿ/ಪ್ರಕರಣಗಳ ಕುರಿತಾದ ಮಾಹಿತಿ ಅಥವಾ ಪೊಲೀಸ್ ಇಲಾಖಾ ಕರ್ತವ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಬಹುದು.
ನೇರ ಫೋನ್‌ಇನ್ ಕಾರ್ಯಕ್ರಮ ಶನಿವಾರ ಬೆಳಗ್ಗೆ 10 ರಿಂದ11 ರವರೆಗೆ ನಡೆಯಲಿದ್ದು, ಸಂಪರ್ಕಿಸುವ ಸ್ಥಿರ ದೂರವಾಣಿ ಸಂಖ್ಯೆ: 0820- 2534777 ಆಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.