ಪೆಸಿಫಿಕ್ ಸಾಗರದಲ್ಲಿ ಮುಳುಗಿದ ಹಡಗು

Update: 2017-10-13 17:19 GMT

ಟೋಕಿಯೊ, ಅ. 13: ಫಿಲಿಪ್ಪೀನ್ಸ್‌ಗೆ ಸಮೀಪ ಪೆಸಿಫಿಕ್ ಸಾಗರದಲ್ಲಿ ಶುಕ್ರವಾರ ಸರಕು ಹಡಗೊಂದು ಮುಳುಗಿದ್ದು, ಅದರಲ್ಲಿದ್ದ 11 ಭಾರತೀಯ ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಜಪಾನ್ ತಟರಕ್ಷಣಾ ಪಡೆ ತಿಳಿಸಿದೆ.

ಈ ಪ್ರದೇಶದಲ್ಲಿ ಬೀಸಿದ ಬಿರುಗಾಳಿಗೆ ಸಿಲುಕಿ 33,205 ಟನ್ ಸಾಮರ್ಥ್ಯದ ಹಾಂಕಾಂಗ್ ನೋಂದಣಿಯ ‘ಎಮರಾಲ್ಡ್ ಸ್ಟಾರ್’ ಮುಳುಗಿತು. ಫಿಲಿಪ್ಪೀನ್ಸ್‌ನ ಉತ್ತರದ ತುದಿಯಿಂದ 280 ಕಿ.ಮೀ. ಪೂರ್ವದ ಸಾಗರದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಹಡಗಿನಲ್ಲಿದ್ದ 26 ಭಾರತೀಯರು ಶುಕ್ರವಾರ ಮುಂಜಾನೆ ಅಪಾಯದ ಸಂದೇಶವನ್ನು ರವಾನಿಸಿದರು ಎಂದು ಸಂದೇಶವನ್ನು ಸ್ವೀಕರಿಸಿದ ಜಪಾನ್ ತಟರಕ್ಷಣಾ ಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಪ್ರದೇಶದ ಸಮೀಪ ಚಲಿಸುತ್ತಿದ್ದ ಇತರ 3 ಹಡಗುಗಳು 15 ಮಂದಿಯನ್ನು ರಕ್ಷಿಸಿವೆ. ಆದರೆ, 11 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News