ಉ. ಕೊರಿಯದೊಂದಿಗೆ ಐರೋಪ್ಯ ಒಕ್ಕೂಟದ ವ್ಯಾಪಾರ ಬಂದ್

Update: 2017-10-13 17:26 GMT

ಬ್ರಸೆಲ್ಸ್, ಅ. 13: ಉತ್ತರ ಕೊರಿಯದ ಪರಮಾಣು ಅಸ್ತ್ರ ಅಭಿವೃದ್ಧಿ ಯೋಜನೆಗೆ ಪ್ರತಿಯಾಗಿ ಆ ದೇಶದೊಂದಿಗಿನ ವ್ಯಾಪಾರ ಸಂಬಂಧವನ್ನು ಕೊನೆಗೊಳಿಸಲು ಐರೋಪ್ಯ ಒಕ್ಕೂಟವು ಸೋಮವಾರ ನಿರ್ಧರಿಸುವ ಸಾಧ್ಯತೆಯಿದೆ.

 ಆದರೆ, ಇದರ ಪರಿಣಾಮಗಳು ಸಾಂಕೇತಿಕವಾಗಿರುತ್ತದೆ. ದಿಗ್ಬಂಧನದ ಭಾಗವಾಗಿ ಐರೋಪ್ಯ ಒಕ್ಕೂಟವು ತೈಲ ಮಾರಾಟ ಮತ್ತು ಹೂಡಿಕೆಯ ಮೇಲೆ ನಿಷೇಧ ವಿಧಿಸುತ್ತದೆ. ಆದರೆ, ಐರೋಪ್ಯ ಒಕ್ಕೂಟವು ಉತ್ತರ ಕೊರಿಯಕ್ಕೆ ತೈಲ ಮಾರಾಟ ಮಾಡುತ್ತಿಲ್ಲ ಹಾಗೂ ಅದರ ಹೂಡಿಕೆಯೂ ಹೆಚ್ಚಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News