ಇರಾನ್ ಒಪ್ಪಂದ ಉಳಿಸಿಕೊಳ್ಳಿ: ಅಮೆರಿಕಕ್ಕೆ ಚೀನಾ ಕರೆ

Update: 2017-10-13 17:28 GMT

ಬೀಜಿಂಗ್, ಅ. 13: ಇರಾನ್ ಜೊತೆಗಿನ ಪರಮಾಣು ಒಪ್ಪಂದವನ್ನು ಉಳಿಸಿಕೊಳ್ಳುವಂತೆ ಚೀನಾ ಶುಕ್ರವಾರ ಅಮೆರಿಕಕ್ಕೆ ಕರೆ ನೀಡಿದೆ.

ಈ ಒಪ್ಪಂದ ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

‘‘ಅಂತಾರಾಷ್ಟ್ರೀಯ ಪರಮಾಣು ಪ್ರಸರಣ ನಿಷೇಧ ವ್ಯವಸ್ಥೆ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಒಪ್ಪಂದ ಮಹತ್ವದ್ದಾಗಿದೆ ಎಂದು ನಾವು ಭಾವಿಸುತ್ತೇವೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News