ಶಾಸಕರ ಬ್ಯಾನರ್ ಹರಿದ ಕಿಡಿಗೇಡಿಗಳು: ದೂರು ದಾಖಲು
Update: 2017-10-13 23:08 IST
ಮಂಗಳೂರು, ಅ. 13: ಮಂಗಳೂರು ಉತ್ತರ ಶಾಸಕ ಬಿ. ಮೊಯ್ದಿನ್ ಬಾವ ಅವರ ಫ್ಲೆಕ್ಸ್ (ಬ್ಯಾನರ್) ಕಿಡಿಗೇಡಿಗಳು ವಿರೂಪಗೊಳಿಸಿ ಹರಿದು ಹಾಕಿರುವ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ.
ಕೆ.ಐ.ಎ.ಡಿ.ಬಿ ಕಾಂಕ್ರೀಟ್ ರಸ್ತೆಗೆ 12 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಕಾಮಗಾರಿಗೆ ಶಾಸಕರ ಮುತವರ್ಜಿ ಯಿಂದ ನಡೆಯುವ ರಸ್ತೆ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಥಳೀಯ ನಾಗರಿಕರು ಹಾಗೂ ಕೈಗಾರಿಕೋದ್ಯಮಿಗಳು ಶಾಸಕ ಬಿ.ಮೊಯ್ದಿನ್ ಬಾವ ಅವರಿಗೆ ಅಭಿನಂದನೆ ಸಲ್ಲಿಸಿ ಹಾಕಲಾಗಿದ್ದ 4 ಫ್ಲೆಕ್ಸ್ ಬೋರ್ಡ್ ಗಳನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಣಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.