×
Ad

ಪತ್ತೆಗಾಗಿ ಮಗನಿಂದ ಎಸ್ಪಿಗೆ ದೂರು: ಪೊಲೀಸರಿಂದ ತನಿಖೆ

Update: 2017-10-14 20:07 IST

ಉಡುಪಿ, ಅ.14: ಎರಡು ವರ್ಷಗಳ ಹಿಂದೆ ತಿರುಪತಿಯಲ್ಲಿ ನಾಪತ್ತೆ ಯಾಗಿದ್ದ ಬೈಂದೂರಿನ ವೃದ್ಧರೊಬ್ಬರ ಭಾವಚಿತ್ರ ಇದೀಗ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದು, ಅವರನ್ನು ಪತ್ತೆ ಮಾಡಿಕೊಡುವಂತೆ ಮಗ ಉಡುಪಿ ಜಿಲ್ಲಾ ಎಸ್ಪಿ ಡಾ.ಸಂಜೀವ ಪಾಟೀಲ್ ಅವರಿಗೆ ದೂರು ನೀಡಿದ್ದಾರೆ.

ಬೈಂದೂರಿನ ನಾಗಪ್ಪಯ್ಯ ಆಚಾರಿ ನಾಪತ್ತೆಯಾದ ವ್ಯಕ್ತಿ. 2015ರಲ್ಲಿ ತಿರುಪತಿಗೆ ಹೋದಾಗ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಆಂಧ್ರ ಪ್ರದೇಶ ರಾಜ್ಯದ ತಿರುಮಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನಾಗಪ್ಪಯ್ಯ ಆಚಾರಿ ಕಂಬಳಿ ಹೊದ್ದು ಕುಳಿತುಕೊಂಡಿರುವ ಫೋಟೋ ‘ನಿಮ್ಮ ತಂದೆ ತಾಯಿಯನ್ನು ಹೀಗೆ ನೋಡುತ್ತಿದ್ದಿರಾ’ ಎಂಬ ಬರಹದೊಂದಿಗೆ ಫೇಸ್ ಬುಕ್‌ನಲ್ಲಿ ಹರಿದಾಡುತ್ತಿದೆ.

ಈ ಮಾಹಿತಿ ತಿಳಿದು ನಾಗಪ್ಪಯ್ಯ ಆಚಾರಿಯ ಮಗ ಫೇಸ್‌ಬುಕ್ ಪರಿಶೀಲಿಸಿದಾಗ ಆ ಫೋಟೋದಲ್ಲಿರುವವರು ಅವರ ತಂದೆಯೇ ಎಂಬುದಾಗಿ ತಿಳಿದು ಬಂತು. ಈ ಬಗ್ಗೆ ಮಗ ತನ್ನ ತಂದೆಯನ್ನು ಪತ್ತೆ ಹಚ್ಚಿಕೊಡುವಂತೆ ಎಸ್ಪಿಯವರಿಗೆ ದೂರು ನೀಡಿದ್ದಾರೆ. ‘ಫೇಸ್‌ಬುಕ್‌ನಲ್ಲಿರುವ ನಾಗಪ್ಪಯ್ಯ ಆಚಾರಿಯ ಚಿತ್ರ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಸೈಬರ್ ಕ್ರೈಮ್ ವಿಭಾಗದ ಸಹಕಾರದೊಂದಿಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News