ಅಕ್ರಮ ಮರಳು ಸಾಗಾಟ: ಲಾರಿ, ಚಾಲಕ ವಶ
Update: 2017-10-14 21:06 IST
ಕುಂದಾಪುರ, ಅ.14: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದೆ ಎನ್ನಲಾದ ಲಾರಿ ಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಅ.14ರಂದು ಬೆಳಗಿನ ಜಾವ ಹಟ್ಟಿಯಂಗಡಿ ದೇವಸ್ಥಾನ ದ್ವಾರದ ಜಂಕ್ಷನ್ ಬಳಿ ವಶಪಡಿಸಿಕೊಂಡಿದ್ದಾರೆ.
ಹಟ್ಟಿಕುದ್ರು ಎಂಬಲ್ಲಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಲಾರಿಯನ್ನು ಪತ್ತೆ ಹಚ್ಚಿದ ಪೊಲೀಸರು ಲಾರಿ ಚಾಲಕ ಹಕ್ಲಾಡಿಯ ಗುರುರಾಜ ಗುರುವ(45) ಎಂಬಾತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಎರಡು ಲಕ್ಷ ರೂ. ಮೌಲ್ಯದ ಲಾರಿ ಹಾಗೂ 8 ಸಾವಿರ ರೂ. ವೌಲ್ಯದ ಎರಡು ಯುನಿಟ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.