ಮತ್ತೊಂದು ಕ್ಷಿಪಣಿ ಪರೀಕ್ಷೆಗೆ ಉ.ಕೊರಿಯಾ ಸಿದ್ಧತೆ : ವರದಿ

Update: 2017-10-14 16:38 GMT

ಸಿಯೊಲ್, ಅ.14: ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ನೌಕಾಪಡೆಯ ಕವಾಯತು ನಡೆಸಲು ನಿರ್ಧರಿಸಿರುವಂತೆಯೇ ಉತ್ತರ ಕೊರಿಯಾ ಮತ್ತೊಂದು ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸರಕಾರಿ ಮೂಲಗಳನ್ನು ಉದ್ಧರಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

 ಉತ್ತರ ಫ್ಯೋಂಗನ್ ಪ್ರದೇಶದಲ್ಲಿ ಉಡ್ಡಯನ ವಾಹನಗಳ ಮೇಲೆ ಖಂಡಾಂತರ ಕ್ಷಿಪಣಿಗಳನ್ನು ಸಾಗಿಸುತ್ತಿರುವ ಚಿತ್ರವನ್ನು ಉಪಗ್ರಹಗಳು ಸೆರೆಹಿಡಿದಿವೆ. ಉ.ಕೊರಿಯಾವು ಅಮೆರಿಕವನ್ನು ತಲುಪುವ ಸಾಮರ್ಥ್ಯವುಳ್ಳ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿರಬಹುದು ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯದ ರಕ್ಷಣಾ ಅಧಿಕಾರಿಗಳು ಶಂಕಿಸಿದ್ದಾರೆ ಎಂದು ‘ಡೊಂಗ ಇಲ್ಬೊ’ ದಿನಪತ್ರಿಕೆ ವರದಿ ಮಾಡಿದೆ. ಇದು ಉ.ಕೊರಿಯ ಅಭಿವೃದ್ಧಿಪಡಿಸಿರುವ 14ನೆ ಖಂಡಾಂತರ ಕ್ಷಿಪಣಿಯಾಗಿದ್ದು ಅಮೆರಿಕದ ಅಲಸ್ಕಾ ನಗರವನ್ನು ದಾಟಿ ಸಾಗುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ಊಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News