800 ವರ್ಷಗಳ ಹಿಂದಿನ ಕೋಟೆ, ಹೆಬ್ಬಾಗಿಲ ಚೂರು ಪತ್ತೆ

Update: 2017-10-14 16:57 GMT

ಬೀಜಿಂಗ್, ಅ.14: ಚೀನಾದ ನೈಋತ್ಯ ಪ್ರಾಂತದಲ್ಲಿರುವ ಚೊಂಗ್‌ಕಿಂಗ್ ನಗರಪಾಲಿಕೆ ವ್ಯಾಪ್ತಿಯಲ್ಲಿ ಪುರಾತತ್ವ ಶಾಸ್ತ್ರಜ್ಞರು ಸುಮಾರು 800 ವರ್ಷಗಳ ಹಿಂದೆ ಸೇನಾಪಡೆ ಬಳಸುತ್ತಿದ್ದ ಕೋಟೆಯ ಗೋಡೆ ಹಾಗೂ ಹೆಬ್ಬಾಗಿಲಿನ ಚೂರನ್ನು ಪತ್ತೆ ಮಾಡಿದ್ದಾರೆ.

  ಚೊಂಗ್‌ಕಿಂಗ್‌ನ ಸಾಂಸ್ಕೃತಿಕ ಸಂಪತ್ತು ಸಂಶೋಧನಾ ಸಂಸ್ಥೆ ಹಾಗೂ ಫೆಂಗ್‌ಜಿ ಪ್ರದೇಶದ ಸಾಂಸ್ಕೃತಿಕ ಪಳೆಯುಳಿಕೆ ನಿರ್ವಹಣಾ ಸಂಸ್ಥೆ ಜಂಟಿಯಾಗಿ ಪುರಾತನ ಪಳೆಯುಳಿಕೆಗಳ ಸಂಶೋಧನಾ ಕಾರ್ಯಕ್ಕೆ ಕಳೆದ ಫೆಬ್ರವರಿಯಲ್ಲಿ ಚಾಲನೆ ನೀಡಿದ್ದವು. ಫೆಂಗ್‌ಜೆ ಪ್ರದೇಶದಲ್ಲಿರುವ ಬೈದಿ ಉಪನಗರ ಈ ಹಿಂದೆ ಅತ್ಯಂತ ಪ್ರಮುಖ ಕೋಟೆಯಾಗಿತ್ತು.

  ಉತ್ಖನನ ಕಾರ್ಯದ ಆರಂಭದ ಆರು ತಿಂಗಳಲ್ಲಿ ಕೋಟೆ ಗೋಡೆ, ವೀಕ್ಷಣಾ ಗೋಪುರ, ಶಸ್ತ್ರಾಗಾರ, ಹೆಬ್ಬಾಗಿಲಿಗೆ ಸೇರಿದ 20 ಭಾಗಗಳು ಪತ್ತೆಯಾಗಿವೆ ಎಂದು ಸರಕಾರಿ ಅಧೀನದ ‘ಕ್ಸಿನ್‌ಹುವ’ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಪಳೆಯುಳಿಕೆಗಳು ಸೊಂಗ್ ರಾಜವಂಶ(1127-1279)ದ ಕಾಲದಿಂದ ಕ್ವಿಂಗ್ ರಾಜವಂಶ(1644-1912)ದ ಕಾಲಕ್ಕೆ ಸೇರಿವೆ ಎನ್ನಲಾಗಿದೆ. ಕಬ್ಬಿಣದ ಆಯುಧಗಳು, ಬಿಳಿಜೇಡಿಮಣ್ಣು , ಕಲ್ಲು ಮತ್ತು ತಾಮ್ರದ ಆಯುಧಗಳನ್ನೂ ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಈ ಹಿಂದೆ ಸಂಪೂರ್ಣ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ನಗರವೊಂದಿತ್ತು ಎಂದು ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News