ಕುತುಬಿಯ್ಯ ಮದ್ರಸ ಎಸ್‌ಕೆಎಸ್‌ಬಿವಿ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಅ. 15: ಕುತುಬಿಯ್ಯೆ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ ಎಸ್‌ಕೆಎಸ್‌ಬಿವಿ ಇದರ ವಾರ್ಷಿಕ ಮಹಾಸಭೆಯು ಮುಖ್ಯ ಶಿಕ್ಷಕ ಫಾರೂಖ್ ದಾರಿಮಿ ಗ್ರಾಮ ಚಾವಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಾಪಕ ಅಲೀ ಹೈದರ್ ಫೈಝಿ ದುವಾ ನೆರವೇರಿಸಿದರು. ಹನೀಫ್ ದಾರಿಮಿ ಉದ್ಘಾಟಿಸಿದರು. ಅಬ್ದುಲ್ಲತೀಫ್ ಅಮಾನಿ, ಉಮರ್ ಅಝ್ಹರಿ, ಇಕ್ಬಾಲ್ ಮುಸ್ಲಿಯಾರ್, ಅಬ್ದುಲ್ ಖಾದಿರ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಫೀದ್ ಹಸನ್, ಉಪಾಧ್ಯಕ್ಷರಾಗಿ ಶಾಹಿದ್, ಮಹಶೂಖ್, ಪ್ರಧಾನ ಕಾರ್ಯದರ್ಶಿಯಾಗಿ ಮೂಸ ಮುದ್ದಸ್ಸಿರ್, ಜೊತೆ ಕಾರ್ಯದರ್ಶಿಗಳಾಗಿ ನಿಝಾಮ್, ಶಾಫಿ, ಕೋಶಾಧಿಕಾರಿಯಾಗಿ ಅದ್ನಾನ್ ಹುಸೈನ್, ಗ್ರೂಪ್ ಲೀಡರ್‌ಗಳಾಗಿ ಅಫ್ವಾನ್, ಮುಹ್ಸಿನ್, ಹಾಶಿಮ್ ರೇಂಜ್ ಕೌನ್ಸಿಲರ್‌ಳಾಗಿ ಮುಆದ್, ಮುಝಾಹಿಲ್, ಸ್ವಾಲಿಹ್‌ಅವರನ್ನು ಹಾಗೂ 21 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಎಸ್.ಬಿ.ವಿ.ಗರ್ಲ್ಸ್ ವಿಂಗ್ ನಾಯಕಿಯಾಗಿ ಆಯಿಷತ್ ಶಿಫ, ಉಪನಾಯಕಿಯಾಗಿ ಫಾತಿಮಾ ರಿಹ, ಹಾಗೂ ಗ್ರೂಪ್ ಲೀಡರ್‌ಗಳಾಗಿ ಫರ್ಝಾನಾ, ಫಾಯಿಝ, ಸಫೀದ ಅಝ್ಮಿ ಇವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.