ಎಸ್ಸೆಸ್ಸೆಫ್ ನಿಂದ 'ಕ್ಯಾಂಪಸ್ ಗಲ್ವನೈಸ್ ಕ್ಯಾಂಪ್' ಗೆ ಚಾಲನೆ
Update: 2017-10-15 22:56 IST
ಪುತ್ತೂರು, ಅ. 15: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಆಯೋಜಿಸಿದ "ಕ್ಯಾಂಪಸ್ ಗಲ್ವನೈಸ್ ಕ್ಯಾಂಪ್" ಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅಧ್ಯಕ್ಷತೆಯಲ್ಲಿ ಕೆ.ಜಿ.ಎನ್ ಮಿತ್ತೂರಿನಲ್ಲಿ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎನ್ ಸಂಸ್ಥೆಯ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ರಪೀಕ್ ಸಖಾಫಿ ಚೆರಿಯಪರಂಬ್, ಕೆ.ಎಂ ಮುಸ್ತಫ ನಹೀಂ ಮೊಂಟುಗೊಳಿ, ಶಾಕಿರ್ ಹಾಜಿ ಮಿತ್ತೂರು, ರಾಜ್ಯ ಇಹ್ಸಾನ್ ಸಮಿತಿ ಸದಸ್ಯ ಅಲ್ತಾಫ್ ಕುಂಪಲ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಸ್ವಾಗತಿಸಿದರು, ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ವಂದಿಸಿದರು.