‘ರ‍್ಯಾಪಿಡ್ ಅಟೋ ಸ್ಪಾ’ ಶುಭಾರಂಭ
Update: 2017-10-15 23:24 IST
ಉಡುಪಿ, ಅ.15: ಉಡುಪಿಯ ಸಂತೆಕಟ್ಟೆ ಆಶೀರ್ವಾದ್ ಥಿಯೇಟರ್ ಎದುರು ನೂತನವಾಗಿ ಆರಂಭಗೊಂಡ ‘ರ‍್ಯಾಪಿಡ್ ಅಟೋ ಸ್ಪಾ’ ಅಟೋ ಮೆಟಿಕ್ ಕಾರ್ ವಾಶ್ ಆ್ಯಂಡ್ ಡಿಟೈಲಿಂಗ್ ಕೇಂದ್ರವನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಮಾಂಡವಿ ಬಿಲ್ಡರ್ಸ್ ಆ್ಯಂಡ್ ಡೆವೆಲಪರ್ಸ್‌ನ ಜೆರ್ರಿ ವಿನ್ಸೆಂಟ್ ಡಯಾಸ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಕ್ವಾ ಯಾಹ್ಯಾ, ಎಚ್. ಅಬ್ದುಲ್ ರಝಾಕ್, ಎಚ್. ಯಾಸೀನ್ ಮಲ್ಪೆ, ಅಕ್ಬರ್ ಅಲಿ, ಎಂ.ಶಬ್ಬೀರ್, ಉಮರ್ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.